ವಿಜಯಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ನಿವಾಸ, ಕಚೇರಿ ಮೇಲೆ ವಿಜಯಪುರ ಎಸಿಬಿ ಅಧಿಕಾರಿಗಳು ದಾಳಿಗೈದಿರುವ ಘಟನೆ ನಗರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಲಜಿ ನಿವಾಸ ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ನಿರ್ಮಿತಿ ಕೇಂದ್ರದ ಕಚೇರಿ ಹಾಗೂ ಸ್ಟೋರ್ ನಲ್ಲಿ ದಾಖಲಾತಿಗಳನ್ನು ಪರಿಶೀಲನೆ ಎಸಿಬಿ ತಂಡ ಮಾಡುತ್ತಿದೆ. ಅಲ್ಲದೇ, ನಗರದ ರಾಮದೇವ ನಗರದಲ್ಲಿರುವ ನಿರ್ಮಿತಿ ಕೇಂದ್ರದ ಅಕೌಟೆಂಟ್ ಮಲ್ಲಮ್ಮ ನಿವಾಸದ ಮೇಲೂ ಎಸಿಬಿ ದಾಳಿಗೈದು ದಾಖಲಾತಿ ಚೆಕ್ ಮಾಡುತ್ತಿದ್ದಾರೆ.