ಸಿರವಾರ: ಬೆಳ್ಳಂ ಬೆಳಿಗ್ಗೆ ಪಿಲ್ಡ್ಗೆ ಇಳಿದ ಸಿರವಾರ ಪೋಲೀಸ್ ಠಾಣಾ ಪಿ.ಎಸ್.ಐ ಗೀತಾಂಜಲಿ ಶಿಂದೇ ಯವರು ಗೂಡ್ಸ್ ವಾಹನಗಳ ಮಾಲೀಕರಿಗೆ ಚಳಿ ಬಿಡಿಸಿದ್ದಾರೆ. ಗೂಡ್ಸ್ ವಾಹನಗಳ ಟಾಪ್ ಮೇಲೆ ಅಕ್ರಮವಾಗಿ ಹಣದ ಆಸೆಗಾಗಿ ಜನರನ್ನ ಕೂಡಿಸಿ ಅಸುರಕ್ಷಿತವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರನ್ನ ಕುರಿಗಳಂತೆ ತುಂಬಿಕೊಂಡು ಸಾಗಾಟವನ್ನ ಮಾಡುತ್ತಿದ್ದರು.

ಈ ಹಿಂದೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸಿರವಾರ PSI ಸಾಕಷ್ಟು ಬಾರಿ ವಾರ್ನಿಂಗ್ ಕೂಡಾ ಮಾಡಿದ್ದರು. ಪದೇ ಪದೇ ವಾಹನ ಚಾಲಕರು ನಿಯಮ ಉಲ್ಲಂಘನೆ ಮಾಡಿರುವುದನ್ನ ಕಂಡು ಕೆಂಡ ಮಂಡಲವಾಗಿದ್ದ ಪಿಎಸ್ಐ ತಮ್ಮ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದು ವಾಹನಗಳ ಟಾಪ್ಗಳ ಮೇಲೆ ಕೂಡಲು ಬಳಸುವಂತ ಮರದ ಕಟ್ಟಿಗೆಯ ಹಲಿಗೆಗಳನ್ನು ತೆರವುಗೊಳಿಸಿ ಬೆಂಕಿಯನ್ನ ಹಚ್ಚಿ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
 
	    	










 
                                 
                                 
                                 
                                







