ದೇವರ ಹಿಪ್ಪರಗಿ : ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ ಕಾರ್ಯಕ್ರಮ ಶನಿವಾರದಂದು ಚಾಲನೆ ದೊರತಿದೆ. ಈ ಹಿನ್ನಲೆಯಲ್ಲಿ ದೇವರ ಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ನೀಡಿದ ಪಹಣಿ, ವಾಸಸ್ಥಳ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡಿದ್ದಾರೆ.
ಆದರೆ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ಹಾಕಿದ್ದಾರೆ. ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ಗೆಜಟ್ ಹೊರಡಿಸಿ ಆದೇಶ ಹೊರಡಿಸಿದೆ. ಆದರೆ ಅಧಿಕಾರಿಗಳು ಸರಕಾರಿ ನಿಯಮಾನುಸಾರ ಪರಿಶೀಲನೆ ಮಾಡದೇ ಸುಖಾ ಸುಮ್ನೆ ವಿನಃ ಕಾರಣ ನೀಡಿ ಅಲೆದಾಡಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಜನಪ್ರತಿನಿದಿಗಳ ಗಮನಕ್ಕೆ ತಂದಿದ್ದೆವೆ. ಜೊತೆಗೆ ಇತ್ತೀಚೆಗೆ ಸಿಂದಗಿ ಮತಕ್ಷೇತ್ರ ಉಪಚುನಾವಣೆಯಲ್ಲಿ ಮುಖ್ಯ ಮಂತ್ರಿ ಸೇರಿದಂತೆ, ಬಿಜೆಪಿ ಮುಖಂಡರು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಕುಂಟ ನೆಪ ಹೇಳ್ತಾಯಿದ್ದಾರೆ ಎಂದು ತಳವಾರ ಸಮುದಾಯದ ಮುಖಂಡರು ಆರೋಪ ಮಾಡಿದರು. ಈ ಸರ್ಕಾರಕ್ಕೆ ನಮ್ಮ ಸಮುದಾಯದ ಮತ ಬೇಕು. ಆದರೆ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮಾತ್ರ ಸಿಗುತ್ತಿಲ್ಲ. ನಮ್ಮ ಸಮುದಾಯಕ್ಕೆ ಕೂಡಲೇ st ಪ್ರಮಾಣಪತ್ರ ಒದಗಿಸಬೇಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಒಂದು ವೇಳೆ ಕೆಟ್ಟ ರೀತಿಯಾಗಿ ನಡೆದುಕೊಂಡರೆ ನಾವು ಕೆಟ್ಟವರು ಆಗುತ್ತೆವೆ.ಈಗಾಗಲೇ ರಾಜ್ಯದ ಯಾವ ಮೂಲೆಯಲ್ಲಿಯೂ ತಳವಾರ ಸಮುದಾಯದವರು ಪ್ರ ವರ್ಗ ೧ ರ ಜಾತಿ ಪ್ರಮಾಣ ಪತ್ರ ಪಡೆಯೊದಿಲ್ಲ ಎಂದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡ ರಾಜಶೇಖರ ಮಣ್ಣೂರ, ವಿಠ್ಠಲ ಆನೆಗುಂದಿ, ಸಂಜೀವ ಪಾಪಡಿ, ಅಂಬಣ್ಣ ಆನೆಗುಂದಿ, ಬಸವರಾಜ ತಳವಾರ, ರಾಮ ತಳವಾರ, ಶರಣಪ್ಪ ವಾಲಿಕಾರ, ಭೀಮಣ್ಣ ಪಾಪಡಿ ಉಪಸ್ಥಿತರು.