-
ಜೆಸಿಐ ರಾಯಚೂರು ಅಧ್ಯಕ್ಷರಾಗಿ ಆರ್.ಪಿ.ಬಂಗಾರ ರಾಜು, ಕಾರ್ಯದರ್ಶಿಯಾಗಿ ಮಂಜುನಾಥ ಪಿ.ಪಾಟೀಲ್,
ರಾಯಚೂರು.ಡಿ.೨೦- ಜೆಸಿಐ ರಾಯಚೂರು ಅಧ್ಯಕ್ಷರಾಗಿ ಆರ್.ಪಿ.ಬಂಗಾರ ರಾಜು, ಕಾರ್ಯದರ್ಶಿಯಾಗಿ ಮಂಜುನಾಥ ಪಿ.ಪಾಟೀಲ್, ರಾಯಚೂರಿನ ಪ್ರತಿಷ್ಠಿತ ಸಂಸ್ಥೆಯಾದ ಜೆಸಿಐನ ೨೦೨೨ ರ ಸಾಲಿನ ಚುನಾವಣೆ ಇಂದು ಬೆಳಿಗ್ಗೆ ನಗರದ ಪಟೇಲ್ ಗಂಜ್ ಮರ್ಚಂಟ್ಸ್ ಆವರಣದಲ್ಲಿ ನಡೆಯಿತು.
-
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ಪಿ.ಬಂಗಾರ ರಾಜು, ಕಾರ್ಯದರ್ಶಿಯಾಗಿ ಮಂಜುನಾಥ ಪಿ.ಪಾಟೀಲ್, ಕೋಶಾಧ್ಯಕ್ಷರಾಗಿ ಶಿವಕುಮಾರ ಮಾಗನೂರ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅದೇ ರೀತಿಯಾಗಿ ಉಪಾಧ್ಯಕ್ಷರಾಗಿ ಸಚಿನ್ ಇನ್ನಾಣಿ, ರಾಜೀವ್ ನಹಾರ, ಸಮಕೀತ್ ಜೈನ್, ಸಂಜಯ ವೈಷ್ಣವ, ನವೀನ ಹೆಚ್. ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ವಿನೋದ ದೋಖ, ನಿರ್ದೇಶಕರಾಗಿ ಅಳ್ಳುಂಡಿ ಬದರಿನಾಥ, ರಂಜಿತ್ ಕುಮಾರ ಕಟ್ಟಾ, ದೇವೇಂದ್ರ ಪಟೇಲ್, ನಿತೀಶ್, ರಾಕೇಶ ಜಾಂಗಡಾ, ವಿಜಯ ಸಕ್ರಿ, ವಿಶಾಲ ಹಂಚಾಟೆ, ಗೌತಮ್ ಶುಕ್ಲಾ, ಸಾವಿತ್ರಿ ಶ್ರೀವೀರ, ಸಂಜೀವ ಬೊಹರಾ, ಬಿ.ಟಿ.ಅಮರೇಶ ರವರು ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ವಿನೀತ್ ಬೊಹರಾ, ವಿಕಾಸ ಜೈನ್, ಸುನೀಲ್ ವೈಷ್ಣವ ಮತ್ತು ನಿಕಟ ಪೂರ್ವ ಅಧ್ಯಕ್ಷರಾಗಿ ರಿಕಬ್ ಚೌಧರಿ, ಮಾಜಿ ಅಧ್ಯಕ್ಷರಾದ ಗೌತಮ್ ಜೈನ್, ಪಿ ಬಸವರಾಜ್, ಅಶ್ವಿನ್ ಬಂಟಿಯಾ, ಅಮ್ಮಣ್ಣ ಉನ್ನಿ, ಜಂಬಣ್ಣ ವೈ, ಅಶೋಕ್ ಲೋಧಾ, ರಾಕೇಶ್ ರಾಜಲಬಂಡಿ ಉಪಸ್ಥಿತರಿದ್ದರು