ರಾಯಚೂರು.ಡಿ.೨೦-ಕನ್ನಡ ದ್ವಜಕ್ಕೆ ಬೆಂಕಿ ಹಚ್ಚಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ದ್ವಂಸಗೊಳಿಸಿದ ಎಂ. ಇ.ಎಸ್ ಸಂಘಟನೆ ಮತ್ತು ಶಿವಸೇನಾ ಸಂಘಟನೆ ಯನ್ನು ನಿಷೇಧಗೊಳಿಸಲು ಜಿಲ್ಲಾ ಕುರುಬರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಒತ್ತಾಯಿಸಿದರು.
ಬೆಳಗಾವಿ ನಗರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಅದೇ ಮಧ್ಯರಾತ್ರಿ ಅಪ್ಪಟ ದೇಶಭಕ್ತ ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಧ್ವಂಸಗೊಳಿಸಿ ಪುಂಡತನ ಮರೆಯುತ್ತಿರುವ ಶಿವಸೇನೆ ಹಾಗೂ ಎಂ. ಇ. ಎಸ್.ಸಂಘಟನೆಗಳು ಗಡಿಪಾರು ಮಾಡಬೇಕು. ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಮುಖ್ಯಮಂತ್ರಿಗಳು, ಸಚಿವರುಗಳು, ವಿರೋಧ ಪಕ್ಷದವರು, ಶಾಸಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಬೆಳಗಾವಿ ವಾಸ್ತವವಾಗಿ ಇಂತಹ ಘಟನೆ ನಡೆದಿರುವುದಕ್ಕೆ ಖಂಡಿಸುತ್ತೇವೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ರರಿಗೆ ಕರ್ನಾಟಕದ ಹಲವು ಕಡೆ ಅವಮಾನ ಮಾಡುವ ಕೃತ್ಯಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ ಕೂಡಲೇ ರಾಯಣ್ಣನ ಪ್ರತಿಮೆಯನ್ನು ಪುನಃಸ್ಥಾಪಿಸಿ ಭದ್ರತೆ ಒದಗಿಸಿ ಸ್ವತಂತ್ರ ಹೋರಾಟಗಾರರಿಗೆ ಗೌರವವನ್ನು ಸಲ್ಲಿಸಬೇಕು ಇಂತಹ ಘಟನೆಗೆ ಕಾರಣರಾದ