ಅಫಜಲಪುರ: ತಾಲೂಕಿನ ರೈತರ ಹೊಲಗಳಿಗೆ ನೀರು ಹಾಯಿಸಲು ಸಮರ್ಪಕ ವಿದ್ಯುತ್ ಕೊರತೆ ಆಗುವುದರಿಂದ ರೈತರ ಬೆಳೆಗಳು ಹಾನಿಯಾಗುತ್ತಿದೆ. ಹಾಗಾಗಿ ವಿದ್ಯುತ್ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಹಲವಾರು ರೈತ ಮುಖಂಡರ ಜೊತೆ ಅಫಜಲಪುರ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮಾಹಾಂತೇಶ ಎಸ್ ಜಮಾದಾರ ಮತ್ತು ಶ್ರೀಯುತ ಅರುಣ್ ಕುಮಾರ್ ಪಾಟೀಲ್ ಅವರು ಜೇಸ್ಕಾಂ ಕಲಬುರ್ಗಿ ಎಂ.ಡಿ ಅವರನ್ನು ಹಲವಾರು ರೈತ ಮುಖಂಡರ ಜೊತೆ ಭೇಟಿ ಮಾಡಿ ರೈತರಿಗೆ ಶಾಶ್ವತ ವಿದ್ಯುತ್ ಪರಿಹಾರ ದೊರಕಿಸಿಕೊಡಬೇಕೆಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ.ಪಂ ಸದಸ್ಯರಾದ ಸಿದ್ದಾರ್ಥ್ ಬಸರಿಗಿಡ ಮತ್ತು ಬಡದಾಳ ಗ್ರಾ.ಪಂ ಅಧ್ಯಕ್ಷ ಅಮೃತ ಮಾತಾರಿ, ಗುರು ಬಡದಾಳ ಶ್ರೀಶೈಲ ಗೊಳೆ ಮತ್ತು ಹಲವು ರೈತ ಮುಖಂಡರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ