ಇಂಡಿ : ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ತಾಳಿದೆ, ಹಿಂದೂ ಪರ ಮಾತಾಡಬೇಕೊ ಅಥವಾ ಮುಸ್ಲಿಂ ಪರವಾಗಿ ಮಾತಾಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಪಕ್ಷವಿದೆ ಎಂದು ಬಿಜಿಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ ಮಾತಾನಾಡಿದರು.
ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ ಆಶ್ರಯದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಕಿಡಿಕಾರಿದರು.
ವಿಶೇಷವಾಗಿ ಮೋದಿ ಸರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿನ್ ಅಂತಾ ಯಾವುದೇ ಧರ್ಮಗಳ ಆಧಾರಿತವಾಗಿ ಸರಕಾರಿ ಯೋಜನೆಗಳು ರಚಿಸಿಲ್ಲ, ಭಾರತದ ಪ್ರತಿಯೊಬ್ಬ ಪ್ರಜೆ, ನಾಗರಿಕನಿಗೂ ಅಭಿವೃದ್ಧಿಯ ಕಲ್ಯಾಣ ಆಗುವ ಯೋಜನೆ ರಚನೆಗೊಳಿಸಲಾಗಿದೆ ಎಂದರು. ಆದರೆ ಈ ದೇಶದ ಸಂಸ್ಕೃತಿ, ಸಂಪ್ರದಾಯ, ಆಚರಣೆಯ ಪದ್ದತಿ ಗೊತ್ತಿಲ್ಲದ್ದಕ್ಕೆ ಕಾಂಗ್ರೆಸ್ ನೆಲ ಕಚ್ಚಿದೆಕೊಂಡಿದೆ. ಇವತ್ತು ನಾಡಿನ ಜನರ ಸಮಸ್ಯ, ಅಭಿವೃದ್ಧಿ ಕಲ್ಯಾಣ ಕುರಿತು ಚೆರ್ಚೆ ಯಾಗಬೇಕಾಗಿದ್ದ ಮಹತ್ವದ ಅಧಿವೇಶನ ವೇದಿಕೆಯಲ್ಲಿ ಸುಖಾ ಸುಮ್ನೆ, ವಿನಃ ಕಾರಣ ಸ್ವಾರ್ಥ ರಾಜಕಾರಣ ಹುನ್ನಾರಕ್ಕಾಗಿ 10 ದಿನಗಳ ಕಾಲ ಸಮಯವನ್ನು ಹಾಳು ಮಾಡಿದ್ದಾರೆ. ಎಲ್ಲೊ ಕುಂದಾಪುರ, ಉಡುಪಿಯಲ್ಲಿ 4 ಜನ ವಿಧ್ಯಾರ್ಥಿಗಳು ಮಾಡಿದ್ದ ಹಿಜಾಬ್ ಕಿರಿಕ್, ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹರಿಬಿಟ್ಟು ನರೇಂದ್ರ ಮೋದಿ ಮತ್ತು ರಾಜ್ಯ ಸರಕಾರ ವಿರುದ್ಧ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರ ವಿರುದ್ದ, ರಾಷ್ಟ ದ್ರೋಹ ಚಟುವಟಿಕೆಗಳನ್ನು ಮಾಡಲು, ಕೆಟ್ಟ ಶಕ್ತಿಗಳಿಗೆ ತರಬೇತಿ, ಪ್ರಚೋದನೆ ಕೊಡಲಿಕ್ಕೆ ಬೇರೆ ಬೇರೆ ಸಂಘಟನೆಗಳಿಂದ ಹಣಕಾಸಿನ ಸಹಕಾರ ಕೂಡಾ ನೀಡುತ್ತಾರೆ ಎಂದು ಆರೋಪ ಮಾಡಿದರು. ಆದರೆ ನಮ್ಮ ದೇಶ ಆಚಾರ, ವಿಚಾರ, ಸಂಸ್ಕೃತಿ ಆಧಾರಿತವಾಗಿ ಹಿಂದತ್ವದ ರಾಷ್ಟ್ರ ನಿರ್ಮಾಣವಾಗಿದೆ ಎಂದು ರಾಷ್ಟ್ರ ದ್ರೋಹಿಗಳಿಗೆ ಟಾಂಗ್ ನೀಡಿದರು. ಮುಸ್ಲಿಂ ಹೆಣ್ಣು ಮಕ್ಕಳು ಸಂಕೊಲೆಯಲ್ಲಿ ಬಂದಿತರಾಗಿದ್ದಾರೆ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆದರೆ ಹಿಜಾಬ್, ಬುರ್ಖಾ ವಿರುದ್ಧ ನಾವು ಇಲ್ಲಾ. ನಾಳೆ ಸರಕಾರಿ ಕಚೇರಿ ಮತ್ತು ಇತರೆ ಸ್ಥಳದಲ್ಲಿ ಕೂಡಾ ಅವಕಾಶ ಕೇಳುತ್ತಾರೆ. ಆದರೆ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಪಕ್ಷದವರು ದಾರಿ ತಪ್ಪಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಅಲ್ಪಸಂಖ್ಯಾತರಿಗೆ ಈ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಎಲ್ಲಾ ವಿಧದ ಹುದ್ದೆಯಲ್ಲಿ ಅತ್ಯತ್ತನತ ಶ್ರೇಣಿಯ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿಲು ಅವಕಾಶ ಮಾಡಿಕೊಟ್ಟಿದೆ ಎಂದರು. ಏಕೋ ಗೊತ್ತಿಲ್ಲ ಸಿದ್ದರಾಮಯ್ಯ ಅವರು, ಕುಂಕಮ ಕೇಸರಿ ಕಂಡರೆ ಏಕೆ ಹೀಗೆ ಆಡುತ್ತಾರೋ ! ಆದರೆ ಭವಿಷ್ಯದಲ್ಲಿ ಜನರು ಜಾಗೃತಿಯಾಗಿ ಎಚ್ಚರಿಕೆಯ ಸಂದೇಶ ಕೊಡುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ದಯಸಾಗರ ಪಾಟೀಲ್, ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ಶಿಲವಂತ ಉಮರಾಣಿ, ಅನೀಲ ಜಮಾದಾರ ಮಾತಾನಾಡಿದ ಅವರು, ಅಧಿಕಾರ ಪಡೆಯಲಿಕ್ಕೆ ಕಾಂಗ್ರೆಸ್ ಪಕ್ಷ ಯಾವುದೇ ಬೆಲೆ ತೆತ್ತರೂ ಅಧಿಕಾರ ಹಿಡಿಯುವ ತವಕದಲ್ಲಿದೆ. ರಾಷ್ಟ್ರದ ಹಿತ ಮುಖ್ಯ ವಲ್ಲ, 60 ವರ್ಷಗಳ ಕಾಲ ದಿನ ದಲಿತರ, ಅಲ್ಪ ಸಂಖ್ಯಾತರ, ರೈತರ ಗರಿಬೆ ಹಟಾವೋದ ಹೆಸರಲ್ಲಿ ಮತ ಪಡೆದು ರಾಜಕಾರಣ ಮಾಡಿದ್ದಾರೆ ವಿನಃ ಅಭಿವೃದ್ಧಿ ಅಲ್ಲಾ. ಕಾಂಗ್ರೆಸ್ ಪಕ್ಷದ ದುರಾಡಳಿತ ನೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ 130 ಕೋಟಿ ಜನರ ಶಾಪ ತಟ್ಟಿದೆ ಎಂದರು. ಇವತ್ತು ಕಾಂಗ್ರೆಸ್ ಒಡೆದಾಳುವ ಕೆಟ್ಟ ನೀತಿಗಳ ಬಗ್ಗೆ ಮತ್ತು ಹಿಜಾಬ್, ಹರ್ಷಾ ವಿಚಾರ ಹಿನ್ನಲೆ ಹಳ್ಳಿ ಕಟ್ಟೆಯ ಮೇಲೆ ಕುಳಿತು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಕುಮಾರ ಸಗಾಯಿ, ಚಿದಾನಂದ ಛಲವಾದಿ, ರವಿ ವಗ್ಗೆ ರಾಜಶೇಖರ ಯರಗಲ್,
ಸೋಮು ನಿಂಬರಗಿಮಠ, ವಿಜಯಲಕ್ಷ್ಮಿ ರೂಗಿಮಠ, ದೇವೆಂದ್ರ ಕುಂಬಾರ, ಸಂಜು ದಶವಂತ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರು.