ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!
ಇಂಡಿ: ತಾಲೂಕಿನ ಮಿರಗಿ ಗ್ರಾಮ ಪಂಚಾಯಿತಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಕಾರ್ಯಕರ್ತರು ಬುಧವಾರ ಭೇಟಿ ನೀಡಿ ಅಂಗವಿಕಲರಿಗಾಗಿ ನಿಗದಿಪಡಿಸಿದ ಅನುದಾನ ಬಳಕೆಯ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿನೋದ ಖೇಡ ಮಾತನಾಡಿ, ಪಂಚಾಯಿತಿಯಲ್ಲಿ ವಿಕಲಚೇತನರ ಐದು ಪ್ರತಿಶತ ಅನುದಾನವನ್ನು ಬಳಕೆ ಮಾಡದೇ ಇರುವ ಕುರಿತು ಪಿಡಿಓ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಕೂಡಲೇ ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಬೇಕೆಂದು ಮತ್ತು ಗ್ರಾಮ ಪಂಚಾಯಿತಿಯಲ್ಲಿ ವಿ.ಆರ್.ಡಬ್ಲ್ಯೂ ಎರಡು ವರ್ಷಗಳಿಂದ ಕಾರ್ಯನಿರ್ವಹಿಸದೆ ಇರುವ ವಿಚಾರವಾಗಿ ಕೂಡಲೇ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದುತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲೀಕಾರ, ತಾಲೂಕಾಧ್ಯಕ್ಷ ನಿಂಗರಾಜ ಬಿಸನಾಳ, ಸಿದ್ದರಾಮ ಹಳ್ಳೂರ, ವಿಕಾಸ ಖೇಡ, ಅಮೃತ ಪಾಟೀಲ, ಅಂಗವಿಕಲರಾದ ಸಿದ್ದು ಹಳ್ಳೂರ, ಶರಣು ಕಡಕೋಳ ಸೇರಿದಂತೆ ಮಿರಗಿ ಗ್ರಾಮದ ಅನೇಕ ಗ್ರಾಮಸ್ಥರು ಇದ್ದರು.
ಇಂಡಿ: ಲೂಕಿನ ಮಿರಗಿ ಗ್ರಾಮ ಪಂಚಾಯಿತಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಕಾರ್ಯಕರ್ತರು ಬುಧವಾರ ಭೇಟಿ ನೀಡಿದರು.




















