ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ
ವಿಜಯಪುರ :ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಸಮಿತಿಯ ೨೧ ಜನ ಹೋರಾಟಗಾರರಿಗೆ ಜಾಮೀನು ಸಿಕ್ಕ ಹಿನ್ನಲೆ ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರಿಗೆ ಹಾಗೂ ಜಮೀನು ನೀಡಿದ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಏನಾದ್ರು ಅಭಿವೃದ್ಧಿ ಕಾರ್ಯಗಳು ಆಗಿದ್ದರೆ ಅದು ಹೋರಾಟಗಳಿಂದ ಆಗಿದೆ ಮೆಡಿಕಲ್ ಕಾಲೇಜ್ ಹೋರಾಟವನ್ನು ಜಿಲ್ಲೆಯ ಹೋರಾಟಗಾರರು ವೈದ್ಯಕೀಯ ಕಾಲೇಜ್ ಹೋರಾಟವನ್ನು ಕೈಗೆತ್ತಿಕೊಂಡಾಗ ಬಿಜೆಪಿ ಪಕ್ಷವು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿತ್ತು. ಹೋರಾಟಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ನಾಮಕೆವಾಸ್ತೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದ್ದಾರೆ ಇದು ಹೋರಾಟವನ್ನು ದಿಕ್ಕು ತಪ್ಪಿಸುವ ತಂತ್ರ ಎಂದು ಕಿಡಿಕಾರಿದ ಅವರು ಮುಖ್ಯಮಂತ್ರಿಗಳು ಮತ್ತು ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಜನ ನೀಡಿದ ಅಧಿಕಾರದ ಋಣ ತೀರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಹೋರಾಟಗಾರ ಗಿರೀಶ ಕಲಘಟಗಿ ಅವರು ಮಾತನಾಡಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟವು ಜನರ ಹೋರಾಟವಾಗಿದ್ದು ಜಿಲ್ಲೆಯ ಜನ ತನು ಮನ ಧನದಿಂದ ಸಹಾಯ ಸಹಕಾರ ಮಾಡಿದ್ದಕ್ಕೆ ಹೋರಾಟ ಯಶಸ್ವಿ ಆಗಿದೆ. ಈ ಹೋರಾಟದ ಗೆಲವು ಜನರ ಗೆಲವು ಎಂದು ಹೇಳಿದರು.
ಹೋರಾಟಗಾರ ಲಾಯಪ್ಪ ಇಂಗಳೆ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಮುಂದಿನ ಮಕ್ಕಳ ಹಾಗೂ ಜನಾಂಗದ ಭವಿಷ್ಯದ ದೃಷ್ಟಿಯಿಂದ ಹೋರಾಟದ ಅವಶ್ಯಕತೆ ಇತ್ತು ಮೆಡಿಕಲ್ ಕಾಲೇಜ್ ಹೋರಾಟವು ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆ ಆಗಿತ್ತು ಸರಕಾರದ ಜನವಿರೋಧಿ ನೀತಿ ಹಾಗೂ ರಾಜಕೀಯ ಕುತಂತ್ರದ ವಿರುದ್ಧ ಜನರ ಸ್ವಾಭಿಮಾನ ಗೆದ್ದಿದೆ ಎಂದು ಹೇಳಿದರು.ಹಿರಿಯ ಹೋರಾಟಗಾರರಾದ ಅರವಿಂದ ಕುಲಕರ್ಣಿ,ಮಲ್ಲಿಕಾರ್ಜುನ ಕೆಂಗನಾಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಬಿಜೆಪಿ ಮುಖಂಡ ಉಮೇಶ ಕಾರಜೋಳ ಜಾಮೀನು ಪಡೆದ ಹೋರಾಟಗಾರರಾದ ವಿನೋದ ಖೇಡ,ಭಾರತಕುಮಾರ ಎಚ್ ಟಿ ಮಲ್ಲಿಕಾರ್ಜುನ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಸುನೀತಾ ಮೋರೆ, ಮೀನಾಕ್ಷಿ ಸಿಂಗೆ, ಕಾಮಿನಿ ಕಸವೆ, ಗೀತಾ ಎಚ್, ಲಲಿತಾ ಬಿಜ್ಜರಗಿ, ಶಿವಬಾಳಮ್ಮ ಕೊಂಡಗೂಳಿ, ಕಾವೇರಿ ರಜಪೂತ,ರೇಣುಕಾ ಕೋಟ್ಯಾಳ ಶಶಿಕಲಾ ಮ್ಯಾಗೇರಿ, ಸುನಂದಾ ರಾಠೋಡ ಜ್ಯೋತಿ ಮಿಣಜಗಿ ಮಲ್ಲಿಕಾರ್ಜುನ ಬಟಗಿ, ಜಗದೇವ ಸೂರ್ಯವಂಶಿ ಹಾಗೂ ಹೋರಾಟಗರರಾದ ಬೋಗೇಶ ಸೋಲಾಪುರ ಲಕ್ಷ್ಮಣ ಕಂಬಾಗಿ, ಅಶೋಕ ವಾಲಿಕಾರ ವಿಕಾಸ ಖೇಡ ವಿ.ಎನ್ ಪಾಟೀಲ. ಅಂಬಣ್ಣ ಗುನ್ನಾಪುರ ಅನಿಲ ಪವಾರ ಡೈರಿ ಸ್ವಾಮಿ ರಾಜು ಕುಮಟಗಿ ಸುರೇಶ ಖೇಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.



















