ಮುದ್ದೇಬಿಹಾಳ ; ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ ಬೆಂಗಳೂರು ನಿರ್ದೇಶಕರಾಗಿ ಆಯ್ಕೆಯಾದ ಆನಂದಗೌಡ ಬಿರಾದಾರ ಅವರಿಗೆ ಮುದ್ದೇಬಿಹಾಳ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಮತ್ತು ವಿಜಯಪುರ ಬಾಗಲಕೋಟೆಯ ಆನಂದಗೌಡ ಗೆಳಯರ ಬಳಗದಿಂದ ರವಿವಾರ ಪಟ್ಟಣದ ಓಸ್ವಾಲ್ ಪಂಗ್ಶನ್ ಹಾಲ್ ನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು ಎಲ್ಲಾ ಗೆಳಯ ಬಳಗದವರು ಬೃಹತ್ ಹೂವಿನ ಹಾರವನ್ನು ಹಾಕಿ ಪೇಟ ತೂಡಸಿ ಶಾಲು ಹೊದಿಸಿ ಅಭಿನಂದಿಸಿದರು
ಈ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಎಂ .ಬಿ ಬಿರಾದಾರ, ವಿಜಯಪುರ ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಅರ್ಜುನ ಲಮಾಣಿ,ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಆನಂದಗೌಡ ಬಿರಾದಾರ ಅವರು ಎಲ್ಲರ ಪ್ರೀತಿ ವಿಶ್ವಾಸದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಆನಂದಗೌಡರು ಸೌಮ್ಯ ಸ್ವಭಾವದ ಅಪರೂಪ ವ್ಯಕ್ತಿತ್ವದ ವ್ಯಕ್ತಿ ಅವರ ವ್ಯಕ್ತಿತ್ವವೇ ಅವರನ್ನು ಉನ್ನತ ಮಟ್ಟದ ಹುದ್ದೆಗೆ ಏರಿಸಿದೆ ಎಂದರು, ಆನಂದಗೌಡ ಅವರ ಗೆಳಯರು ಮತ್ತು ಆರೋಗ್ಯ ಇಲಾಖೆಯ ನೌಕರರ ಒಗ್ಗಟ್ಟು ಪ್ರಮುಖವಾದದು
ಜಿಓಸಿಸಿ ಬ್ಯಾಂಕ್ ಪ್ರತಿಷ್ಠಿತ 117 ವರ್ಷಗಳ ಹಳೆಯ ಬ್ಯಾಂಕ ಅಮಿತ್ ಷಾ ಅವರಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದೆ ಎಂದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಆನಂದಗೌಡ ಬಿರಾದಾರ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಗೆ ಅವಿರೋಧವಾಗಿ ನಿರ್ದೇಶಕನಾಗಲು ಅಭವಿಜಿತ ವಿಜಯಪುರ ಬಾಗಲಕೋಟೆ ಜಿಲ್ಲೆಯ ಸರಕಾರಿ ನೌಕರರು, ಆರೋಗ್ಯ ಇಲಾಖೆಯವರು, ಶಿಕ್ಷಣ ಇಲಾಖೆಯ ನೌಕರರು ಸ್ನೇಹಿತರು ಪ್ರೀತಿ ವಿಶ್ವಾಸ ಸ್ನೇಹಪರತೆ ಕಾರಣದಿಂದ ನಿರ್ದೇಶಕನಾಗಿದ್ದೇನೆಂದು ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಹಿರಿಯ ತಜ್ಞ ವೈದ್ಯ ಅನಿಲ್ ಕುಮಾರ್ ಶೇಗುಣಸಿ, ಪಿ ಹೆಚ್ ಮುದ್ನೂರ,ಪುಷ್ಪ ಗಚ್ಚಿನಮಠ ಎಂ ಎಂ ಮುಲ್ಲಾ, ಭಧ್ರಣ್ಣನವರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವೈದ್ಯಾಧಿಕಾರಿ ಸತೀಶ ತಿವಾರಿ ಅಧ್ಯಕ್ಷ ನುಡಿಗಳನ್ನಾಡಿದರು.
ಎಂ.ಎಸ್ ಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿದರು ,ವಿಠ್ಠಲ ಕಿಲಾರಹಟ್ಟಿ ಸ್ವಾಗತಿಸಿದರು, ದೀಪರತ್ನಶ್ರೀ ಪ್ರಾರ್ಥಿಸಿದರೆ ಶ್ರೀಶೈಲ ಹೂಗಾರ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್ ಜಿ ಮುರನಾಳ, ಮಹಮ್ಮದ್ ಯಾಸಿನ್, ಡಾ.ಪರಶುರಾಮ ವಡ್ಡರ,ಡಾ.ಸಂದೀಪಕುಮಾರ ಬಿರಾದಾರ, ಸುನಿಲ್ ಕುಮಾರ್ ಹಿರೇಗೌಡರ,ಡಾ.ಮಲ್ಲಮ್ಮ ರೆಡ್ಡಿ, ಡಾ.ಮಹೇಶ್ವರಿ,ವಿ.ವಿ ಪವಾಡಶೆಟ್ಟಿ,ಸಂತೋಷ ಅಂಗಡಗೇರಿ,ಶಿವಾನಂದ ಮಾಗಿ,ಯಲಗೂರೇಶ ತೂಣಶ್ಯಾಳ,ಎಂಎಸ್ ಹುನಗುಂದ, ಬಸವರಾಜ ಬಡಿಗೇರ ಸೇರಿದಂತೆ ನೂರಾರು ಸರಕಾರಿ ನೌಕರರು ಭಾಗವಹಿಸಿದ್ದರು