ಸವಿತಾ ಮಹರ್ಷಿ ಅವರ ತತ್ವಾದರ್ಶ ಹಾಗೂ ಮೌಲ್ಯ ಅಳವಡಿಸಿಕೊಳ್ಳಿ-ಗುರುನಾಥ್ ದಡ್ಡೆ ಕರೆ
ವಿಜಯಪುರ,ಜ.25 : ಸವಿತಾ ಮಹರ್ಷಿಗಳು ಸಮಾಜದ ಉನ್ನತಿಗೆ ಶ್ರಮಿಸಿದ ಮಹನೀಯರಾಗಿದ್ದು, ಇವರ ತತಾದರ್ಶ ಹಾಗೂ ಅವರು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಅವರು ಹೇಳಿದರು.
ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ರವಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹರ್ಷಿಯವರು ನೀಡಿರುವ ಸಂದೇಶಗಳು ಸಮಾಜಕ್ಕೆ ದಾರಿ ತೋರುವ ಕೈದೀವಿಗೆಯಾಗಿವೆ. ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸವಿತಾ ಮಹರ್ಷಿಗಳು ಸಮಾಜದ ಉನ್ನತಿ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಾನಗರ ಪಾಲಿಕೆ ಉಪಯುಕ್ತರಾದ ಮಹಾವೀರ ಬೋರಣ್ಣನವರ ಮಾತನಾಡಿ, ಸವಿತಾ ಮಹರ್ಷಿ ಅವರು ಶ್ರಮದ ಗೌರವ, ಸಮಾನತೆ, ಸತ್ಯನಿಷ್ಠೆ ಪ್ರತಿಪಾದಿಸಿದ ಮಹಾನ್ ಚಿಂತಕರಾಗಿದ್ದು, ಅವರ ವಿಚಾರಧಾರೆಗಳು ಎಂದೆAದಿಗೂ ಸಕಾಲಿಕ ಹಾಗು ಸಾರ್ವಕಾಲಿಕವಾಗಿವೆೆ ಎಂದು ಅವರು ಹೇಳಿದರು.
ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯವನ್ನು ಸವಿತಾ ಮಹರ್ಷಿಯ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಶಿಕ್ಷಣ, ಸಂಸ್ಕೃತಿ ಹಾಗೂ ಸೇವೆಯ ಮೂಲಕ ಪ್ರಗತಿ ಹೊಂದಬೇಕೆAಬುದು ಸವಿತಾ ಮಹರ್ಷಿಯವರ ಸಂದೇಶವಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ.ರಾಘವೇಂದ್ರ ಗುರುಜಾಲ್, ಸವಿತಾ ಮಹರ್ಷಿಗಳು ಕೇವಲ ಪೌರಾಣಿಕ ಮಹಾಪುರುಷರಲ್ಲ, ಪೌರಾಣಿಕ ಕಥನದ ಪ್ರಕಾರ, ಸವಿತಾ ಮಹರ್ಷಿಯವರು ಮಾಘ ಮಾಸದ ಶುಕ್ಲ ಪಕ್ಷದ ರಥಸಪ್ತಮಿ ದಿನ ಜನಿಸಿದರು. ಸವಿತಾ ಮಹರ್ಷಿಯವರು ಅಪಾರ ಜ್ಞಾನಭಂಡಾರ ಹೊಂದಿದ್ದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಂತೋಷ್ ಭೋವಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೀರಯ್ಯ ಸಾಲಿಮಠ, ಜಿಲ್ಲಾ ಖಾದಿ ಗ್ರಾಮೋದ್ಯೋಗದÀ ಅಧಿಕಾರಿಗಳಾದ ನಾರಾಯಣ ಕಾಂಬಳೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರವಿಂದ್ ಎನ್ ಕಲ್ಲೂರ ಸೇರಿದಂತೆ ಲಕ್ಷ್ಮಿಬಾಯಿ ಬಳ್ಳಾರಿ, ಜಗದೇವ ಸೂರ್ಯವಂಶ, ಮಲ್ಲಿಕಾರ್ಜುನ್ ಬಟಗಿ, ಭೀಮರಾಯ ಜಿಗಜಿಣಗಿ, ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.


















