ಇಂಡಿ : ನಾಳೆ ನಡೆಯುವ ಬೃಹತ್ ಶೋಭಾ ಯಾತ್ರೆಯ ಕಾರ್ಯಕ್ರಮ ನಿಮಿತ್ತ ಇಂಡಿ ತಾಲ್ಲೂಕಿನಲ್ಲಿ ಸೂಕ್ತ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇಂಡಿ ತಾಲೂಕಿನಾದ್ಯಂತ ಶೋಭಾ ಯಾತ್ರೆ ಹಿನ್ನಲೆ 4 ಸಿಪಿಐ, 10 ಪಿಎಸ್ಐ, 8 ಎಎಸ್ಐ, ಸಿಪಿಸಿ 192, ಪಿಸಿ 9 ಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ತಾಲ್ಲೂಕಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಈ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಹಿತಕರ ಘಟನೆಗೆ ಪ್ರಚೋದನೆ ಅಥವಾ ಅಹಿತಕರ ಘಟನೆ ಅವಕಾಶ ಮಾಡಿಕೊಟ್ಟರೆ, ಅಶಾಂತಿ ಕಾರಣರಾದರೆ, ಕಾನೂನು ವ್ಯವಸ್ಥೆಗೆ ಭಂಗ ತಂದರೆ ಅವರ ಮೇಲೆ ಶಿಸ್ತು ಕ್ರಮ ಜರಗಿಸಲಾಗುವುದು ಎಂದರು. ಅದಕ್ಕಾಗಿ ಜನತೆ ಪೊಲೀಸರಿಗೆ ಸಾತ್ ನೀಡುವಂತೆ ಡಿವೈಎಸ್ಪಿ ಶ್ರೀಧರ ಮನವಿ ಮಾಡಿದ್ದಾರೆ.