ತುಮಕೂರು ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಮಾಡುವ ದಾಸೋಹ ದಿನಾಚರಣೆ ದಿನದೆಂದೆ ನಮ್ಮ ತಂದೆಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ.
ಮುದ್ದೇಬಿಹಾಳ: ಸಿದ್ದಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳು, ಲಿಂಗೈಕ್ಯ ಚನ್ನಣ್ಣ, ದೇಸಾಯಿ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ
ಸ್ಮರಣೋತ್ಸವ, ದಾಸೋಹ ದಿನಾಚರಣೆ, ಭಕ್ತ ಹಿತಚಿಂತನಾ ಸಭೆ ವಿಶೇಷವಾಗಿ ಬುಧುವಾರ ಪಟ್ಟಣದ ಹುಡ್ಕೋ ಬಡಾವಣೆಯ ಗಜಾನನ ಉದ್ಯಾನದಲ್ಲಿ ಜರುಗಿತು.
ಭಕ್ತ ಹಿತಚಿಂತನ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗದಗ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಗುಳೇದಗುಡ್ಡ ಮುರಘಾಮಠದ ಕಾಶಿನಾಥ ಮಹಾಸ್ವಾಮಿಗಳು ಮಾತನಾಡಿ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ದೇಸಾಯಿ, ದೇಶಮುಖ ,ನಾಡಗೌಡರ ಮನೆತನದವರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ, ಗುಣಸಂಪನ್ನರಾದ ಲಿಂಗೈಕ್ಯ ಚನ್ನನವರು ತಮ್ಮ ಪುತ್ರ ಪ್ರಭುಗೌಡರಿಗೆ ಉತ್ತಮ ಸಂಸ್ಕಾರ ನೀಡಿದ ಫಲವಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಮಕಾಲೆ ಶಿಕ್ಷಣದಿಂದ ಸರಕಾರಿ ನೌಕರರು ಹುಟ್ಟಿದರೆ ಭಾರತೀಯ ಶಿಕ್ಷಣ ಪದ್ದತಿಯಿಂದ ಸಂಸ್ಕಾರವಂತರು ಹುಟ್ಟುತ್ತಾರೆ ಎಂದರು.
ಈ ವೇಳೆ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿದ ಶಸ್ತ್ರ ಚಿಕಿತ್ಸಕ ಶಿವಾನಂದ ಕುಬಸದ ಪ್ರಭುಗೌಡ ದೇಸಾಯಿ ಆತ್ಮಕ್ಕೆ ಹತ್ತಿರದ ವ್ಯಕ್ತಿಯಾಗಿದ್ದಾರೆ ನಾನು ಇಂತವರಿಂದ ಬೆಳೆದೆ ಎನ್ನುವ ದೊಡ್ಡ ವ್ಯಕ್ತಿತ್ವದವರು ಕಾಯಕ ದಾಸೋಹ ಜೀವನದಲ್ಲಿ ಅಳವಡಿಸಿಕೊಂಡವರು ಎಂದರು
ಡಾ. ಮಹಾಂತೇಶ ಬಿರಾದಾರ ಮಾತನಾಡಿ ಕಪ್ಪತಗುಡ್ಡ ಅರಣ್ಯಪ್ರದೇಶ ಸಂರಕ್ಷಣೆ ಮಾಡುವಲ್ಲಿ ನಂದಿವೇರಿಮಠದ ಪೂಜ್ಯರ ಪಾತ್ರ ತುಂಬಾ ದೊಡ್ಡದು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ ವಿದ್ಯೆಯಿಂದ ಪ್ರಗತಿ ಹೊಂದಲು ಸಾಧ್ಯ ನಾಗರಿಕರ ಸಮಾಜದ ಏಳ್ಗಗೆ ಶಿಕ್ಷಣ ತುಂಬಾ ಮುಖ್ಯವೆಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಹೇಶ ಪೂದ್ದಾರ ಮಾತನಾಡಿದರು.
ಕಾರ್ಯಕ್ರಮದ ರೂವಾರಿ ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ತುಮಕೂರು ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಮಾಡುವ ದಾಸೋಹ ದಿನಾಚರಣೆ ದಿನದೆಂದೆ ನಮ್ಮ ತಂದೆಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಮಾಡಲು ಮಾರ್ಗದರ್ಶನ ಕುಂಟೋಜಿ ಭಾವೈಕ್ಯಮಠದ ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡಿದವರು ಅವರ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮ ನಾಟಕೋತ್ಸವ ಮಾಡಲಾಗುತ್ತದೆ ಇದೂಂದು ಪಕ್ಷಾತೀತ ಜಾತ್ಯಾತೀತ ಕಾರ್ಯಕ್ರಮವೆಂದ ಅವರು ತಮ್ಮ ರಾಜಕೀಯ ಜೀವನದಲ್ಲಿ ಗುರುವಾಗಿ ಬಂದವರು ಶಾಸಕ ಬಸನಗೌಡ ಪಾಟೀಲ ಯತ್ನಾಳರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಿಂದಗಿ ಫ್ರಭುಸಾರಂಗಮಠದ ಶ್ರೀ ಪ್ರಭುಸಾರಾಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು,ಕಮತಗಿ ಹುಚ್ಚೇಶ್ವರ ಮಹಾಸ್ವಾಮಿಗಳು,ಮಸೂತಿಯ ಪ್ರಭುಕುಮಾರ ಮಹಾಸ್ವಾಮಿಗಳು, ಗುಳೇದಗುಡ್ಡದ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಕುಂಟೋಜಿ ಭಾವೈಕ್ಯಮಠದ ಶ್ರೀಗುರು ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದರು .
ವಚನ ವಂದನೆಯನ್ನು ಸಾಧನ ಮಹಿಳಾ ಒಕ್ಕೂಟ, ಕುಂಟೋಜಿಯ ಯಶಸ್ವಿನಿ ಮಹಿಳಾ ಸಂಘದ ಸದಸ್ಯರು ಅಕ್ಕಮಹಾದೇವಿಯ 21 ವಚನಗಳ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ಬಸವ ಮಹಾಮನೆ ಬಳಗ, ವೀರಶೈವ ಲಿಂಗಾಯತ ಸಮಾಜ, ಚಿನ್ಮಯಿ ಜೆಸಿ ಗೆಳಯರ, ಹಸಿರು ತೋರಣ ಗೆಳೆಯರ ಬಳಗ, ಮನೆಯಲ್ಲಿ ಮಹಾಮನೆ ಬಳಗದ ಸದಸ್ಯರು ಸೇರಿದಂತೆ ಪಟ್ಟಣದ ಗಣ್ಯರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಾಸ್ತಾವಿಕ ನುಡಿಯನ್ನು ಆರ್ ಎಸ್ ಪಾಟೀಲ ಕುಚಬಾಳ ಮಾಡಿದರು ಹೇಮಾ ಬಿರಾದಾರ ನಿರೂಪಿಸಿ ವಂದಿಸಿದರು.
ಬಾಕ್ಸ್;
ಪುಣ್ಯಸ್ಮರಣೋತ್ಸವ ಅಂಗವಾಗಿ ಲಿಂಗೈಕ್ಯರಾದ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು, ತುಮಕೂರು ಸಿದ್ಧಗಂಗಾಮಠದ ಡಾ|ಶಿವಕುಮಾರ ಶ್ರೀ, ವಿಜಯಪುರದ ಜ್ಞಾನಯೋಗಾಶ್ರಿದ ಸಿದ್ದೇಶ್ವರ ಸ್ವಾಮೀಜಿ, ಮಡಿಕೇಶ್ವರದ ಚನ್ನಣ್ಣ ದೇಸಾಯಿ ಇವರ ಭಾವಚಿತ್ರಗಳಿಗೆ ವಿಶೇಷ ಪೂಜೆಯನ್ನು ಪ್ರಭುಗೌಡ ದೇಸಾಯಿ ದಂಪತಿಗಳು ಮಾಡಿದರು. ಜಂಗಮೋತ್ಸವ ಅಂಗವಾಗಿ ಸ್ವಾಮೀಜಿಗಳಿಗೆ ಪೂಜ್ಯರುಗಳಿಗೆ ಪಾದುಕೆ, ಬೆತ್ತ, ಕೊಡೆ, ವಸ್ತ್ರ, ಕಲ್ಲುಸಕ್ಕರೆ, ಉತ್ತತ್ತಿ, ಗುರು ಕಾಣಿಕೆ ಸಮರ್ಪಣೆ ಸಲ್ಲಿಸಿದರು.
10 ಜನ ಪೌರಕಾರ್ಮಿಕರಿಗೆ ತುಂಬು ಬಟ್ಟೆ ಸಮೇತ ಗೌರವ ಸಮರ್ಪಣೆ, ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರಿಗೆ ತಲಾ 5 ಸಾವಿರ ನಗದು ಪುರಸ್ಕಾರ ಹಾಗೂ ಪಟ್ಟಣದ 60 ವಯಸ್ಸು ದಾಟಿದ ಗಣ್ಯ ಹಿರಿಯ ನಾಗರಿಕರಿಗೆ ವಾಕಿಂಗ್ ಸ್ಟಿಕ್ ವಿತರಿಸಲಾಯಿತು.



















