ವಿದ್ಯುತ್ ಶಾರ್ಟ ಸರ್ಕೂಟನಿಂದ ಕಬ್ಬಿಗೆ ಬೆಂಕಿ ; ೪ ಎಕರೆ ಕಬ್ಬು ನಾಶ
ಇಂಡಿ : ವಿದ್ಯುತ್ ಶಾರ್ಟ ಸರ್ಕ್ಯೂಟನಿಂದ ಕೊಯ್ಲಿಗೆ ಬಂದ ಬೆಲೆ ಬಾಳುವ ಕಬ್ಬು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಈ ಅಗ್ನಿ ಅವಘಡದಲ್ಲಿ ಇಲ್ಲಿನ ಮಲ್ಲಿಕಾರ್ಜುನ ಮುಜಗೊಂಡ ಇವರ ೪ ಎಕರೆ ಕಬ್ಬು ಸುಟ್ಟು ಕರಕಲಾಗಿಸುಮಾರು ಮೂರು ಲಕ್ಷ ರೂ ದಷ್ಟು ಬೆಳೆ ನಷ್ಟವಾಗಿದೆ.
ಬೆಳಿಗ್ಗೆ ೧೦ ಗಂಟೆಯ ವೇಳೆಯಲ್ಲಿ ಆಕಸ್ಮಿಕವಾಗಿ ಕಬ್ಬಿನ ಪಡದ ಮಧ್ಯೆ ಹಾದುಹೋದ ಎಲ್.ಟಿ ವಿದ್ಯುತ್ ಲೈನ ತಂತಿ ಗಾಳಿಯಲ್ಲಿ ಜೋಡಣೆಯಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟದಿಂದ ಉತ್ಪತ್ತಿಯಾದ ಬೆಂಕಿಯ ಕಿಡಿಯು ತಂತಿಯ ಕೆಳಭಾಗದ ಒಣಗಿದ ರವದಿ ತುಂಬಿದ ಕಬ್ಬಿನ ಗದ್ದೆಯಲ್ಲಿ ಬಿದ್ದಿದೆ.
ಇಂಡಿಯ ಅಗ್ನಿಶಾಮಕ ದಳದವರಿಗೆ ಮಾಲಿಕರು ಫೋನು ಮಾಡಿದ್ದಾರೆ. ಪಕ್ಕದ ಜಮೀನ ಬೋರವೆಲ್ ನೀರನ್ನು ಬಳಸಿ ಮತ್ತು ಅಗ್ನಿ ಶಾಮಕ ದಳದವರೂ ಸ್ಥಳಕ್ಕೆ ಧಾವಿಸಿ ೨ ಎಕರೆ ಕಬ್ಬನ್ನು ಉಳಿಸಿದ್ದಾರೆ.. ಗ್ರಾಮ ಲೆಕ್ಕಾಧಿಕಾರಿ ಅವಜಿ, ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬೇಟಿ ನಡೆಸಿದ್ದಾರೆ. ಇಂಡಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



















