2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ
ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸನ್2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆಯನ್ನು ಉದ್ದೇಶಿಸಿ ಪಿಡಿಒ ನಿರ್ಮಲಾ ತೋಟದ ಮಾತನಾಡಿದರು.
ಗ್ರಾಪಂ ವತಿಯಿಂದ ಕೃಷಿ ಹೊಂಡ,ಬದು ನಿರ್ಮಾಣ, ಚೆಕ್ಕ್ ಡ್ಯಾಮ್,ಧನದ ಕೊಟ್ಟಿಗೆ, ವಿವಿಧ ಕಾಮಗಾರಿಗಳಿಗೆ ರೈತರು,ಸಾರ್ವಜನಿಕರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ.
ಮುದ್ದೇಬಿಹಾಳ ರೈತರಿಗೆ,ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಜಿ,ರಾಮ ಜಿ) ಯೋಜನೆ ಅಡಿಯಲ್ಲಿ ಬರುವ ಕಾಮಗಾರಿಗಳಾದ ಕೃಷಿ ಹೊಂಡ,ಬದು ನಿರ್ಮಾಣ, ಚೆಕ್ಕ್ ಡ್ಯಾಮ್,ಧನದ ಕೊಟ್ಟಿಗೆ, ವಿವಿಧ ಕಾಮಗಾರಿಗಳಿಗೆ ರೈತರು,ಸಾರ್ವಜನಿಕರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಅಡವಿ ಸೋಮನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರ್ಮಲಾ ತೋಟದ ಹೇಳಿದರು.
ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಶುಕ್ರವಾರ
ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸನ್2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆಯಲ್ಲಿ ಅವರು ಮಾತನಾಡಿದರು.
ಚವನಭಾವಿ ಗ್ರಾಮದ ಹಳೆಯ ಮನೆ ಬಿದ್ದ ಮನೆ ತೆರಿಗೆ ವಿನಾಯಿತಿ( ಕಡಿಮೆ) ಮಾಲಿಕರು ಅರ್ಜಿ ಸಲ್ಲಿಸಿದರೆ,ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಮೇಲಾಧಿಕಾರಿಗಳು ಹಳೆಯ ಮನೆ ತೆರಿಗೆ( ಟ್ಯಾಕ್ಸ್) ಕಡಿಮೆ ಮಾಡಿ ಎಂದು ಸೂಚನೆ ಬಂದ ತಕ್ಷಣವೇ ಮಾಲಿಕರು ಅವಕಾಶ ನೀಡಲಾಗುತ್ತದೆ.
ಗ್ರಾಪಂ ಅಭಿವೃದ್ಧಿ ಆಗಬೇಕಾದರೆ ಸಾರ್ವಜನಿಕ ತೆರಿಗೆ ಸರಿಯಾದ ಸಮಯಕ್ಕೆ ತೆರಿಗೆ ಕೊಟ್ಟಿದ್ದರೆ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅನುಕೂಲವಾಗುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಡವಿ ಸೋಮನಾಳ
ಗ್ರಾಪಂ ಅಧ್ಯಕ್ಷೆ ಸಂಗಮ್ಮ ಹಂಚಿನಾಳ, ಗ್ರಾಪಂ ಸದಸ್ಯ ಆಂಜನೇಯ ಪವಾರ, ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ,ಸಿಬ್ಬಂದಿಗಳಾದ ಬಲವಂತ ಜೋಗಿನ,ಬಸಣ್ಣ ಬಿರಾದಾರ, ಗುರುರಾಜ ಗುಡಗುಂಟಿ,ಅಂಗನವಾಡಿ ಕಾರ್ಯಕರ್ತೆರಾದ ಇಂದಿರಾ ಕುಂಬಾರ,ಶಾಂತಾ ಈಳಗೇರ,ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ,
ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


















