ಅಧಿಕಾರಿ ಕಾಂತರಾಜ ಚೌವ್ಹಾಣರ ಸಾವು ಸಿ ಓ ಡಿ ತನಿಖೆಗೆ ಆಗ್ರಹ..!
ಇಂಡಿ: ಅರಣ್ಯಾಧಿಕಾರಿ ಕಾಂತರಾಜ ಚೌವ್ಹಾಣರ ಸಾವು ಅನುಮಾನಾಸ್ಪದ ಸಾವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೈಸೂರು ಜಿಲ್ಲೆಯ ಟಿ.ನರಸಿಪೂರದ ಸಾಮಾಜಿಕ ಅರಣ್ಯ ವಲಯದ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ಜ- 19 ರಂದು ರಾತ್ರಿ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಈ ಸಾವು ಸಹಜವಲ್ಲ ಕೂಲೆ ಎಂದು ಅನುಮಾನಗಳು ಕಂಡು ಬಂದಿದೆ. ಹಾಗಾಗಿ ಸರಕಾರ ಈ ಸಾವಿನ ತನಿಖೆಯನ್ನು ಸಿ ಓ ಡಿ ತನಿಖೆಗೆ ಆದೇಶ ನೀಡಬೇಕೆಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಜನತೆ ಹಾಗೂ ಅವರ ಕುಟುಂಬ ಇಂಡಿ ಉಪವಿಭಾಗಾಧಿಕಾರಿಗಳ ಪರವಾಗಿ ಗ್ರೇಡ್ 2 ತಹಶೀಲ್ದಾರ್ ಆರ್.ಬಿ.ಮೂಗಿಯವರಿಗೆ ಮನವಿ ಸಲ್ಲಿಸಿ ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ತಾಂಡಾದ ಕಾಂತರಾಜ ಸೀತಾರಾಮ ಚವ್ಹಾಣ ಅವರು ಒಬ್ಬ ನಿಷ್ಠಾವಂತ ಅಧಿಕಾರಿಯ ಸಾವು ನಾಗರೀಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸರಕಾರ ಕೂಡಲೇ ಯಾವುದೇ ಮೂಲಾಜಿಲ್ಲದೆ ಸಿ ಓ ಡಿ ತನಿಖೆಗೆ ಮೂಲಕ ತಪ್ಪಿತಸ್ಥರಿಗೆ ಬಂದಿಸಿ ಈ ಸಾವಿಗೆ ನ್ಯಾಯ ಒದಗಿಸುಲು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಾಳು ಮುಳಜಿ ಕೆ ಆರ್ ಎಸ್ ಪಕ್ಷದ ಗಣೇಶ ರಾಠೋಡ ಮಾತನಾಡಿ ಕಾಂತರಾಜರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕೆಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಸಿದ್ದು ಡಂಗಾ, ಅಶೋಕ ಜಾಧವ್,ಮಹಿಬೂಬ ಬೇವನೂರ, ಅಣ್ಣಾರಾಯ ಕರನಾಯಕ,ದುಂಡು ಬಿರಾದಾರ,ರಾಜು ಮುಲ್ಲಾ,ಫಜಲು ಮುಲ್ಲಾ, ಬಾಳು ರಾಠೋಡ,ವಿಠಲ ಪೂಜಾರಿ, ಬಸವರಾಜ ಪೂಜಾರಿ,ಮುಂತಾದವರು ಉಪಸ್ಥಿತರಿದ್ದರು

















