ಆರಕ್ಷಕ ಠಾಣೆಯೊಂದಿಗೆ ಕೈಜೋಡಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಹಕಾರ ನೀಡಬೇಕು .
ರಸ್ತೆ ಸುರಕ್ಷತೆ ನಿಯಮ ಪಾಲಿಸಲು ಚಾಲಕರಿಗೆ ಕರೆ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ವಾಹನ ಚಾಲಕರು ರಸ್ತೆಯ ಮೇಲಿನ ಸಂಚಾರಿಗಳ ಸುರಕ್ಷಾ ದೃಷ್ಟಿಯಿಂದ ರಸ್ತೆ ನಿಯಮ ಪಾಲಿಸಬೇಕು. ಪಾದಾಚಾರಿಗಳು ರಸ್ತೆಯ ನಿಜವಾದ ಅನುಕೂಲ ಪಡೆಯುವರು ಹೀಗಾಗಿ ಅವರ ಸುರಕ್ಷತೆ ದೃಷ್ಟಿಯಲ್ಲಿ ಇಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಕ್ರೈ ಪಿಎಸ್‌ಐ ರಂಗಪ್ಪ ಬಂಗಿ ಹೇಳಿದರು.
ಇಲ್ಲಿನ ಪಟ್ಟಣದ ಬಸ್ ಡಿಪೋದಲ್ಲಿ
37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ನಡೆಸಲಾದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ವಾಹನಗಳನ್ನು ಸುರಕ್ಷತೆಯಿಂದ ಇಟ್ಟುಕೊಂಡು, ಸಂಚಾರ ದಟ್ಟಣೆಯನ್ನು ಅರಿತು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಿದಾಗ ರಸ್ತೆ ಸುರಕ್ಷತೆ ಸಾಧ್ಯವಾಗುತ್ತದೆ ಹೀಗಾಗಿ ಆರಕ್ಷಕ ಠಾಣೆಯೊಂದಿಗೆ ಕೈಜೋಡಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಾರಿಗೆ ಘಟಕ ಡಿಪೋ ಮ್ಯಾನೇಜರ್ ಅಶೋಕ ಕುಮಾರ ಭೋವಿ,ಪ್ರಕಾಶ ಪೂಜಾರಿ, ಸಂಗಮೇಶ ಚಲವಾದಿ. ವಾಹನ ಚಾಲಕರ ಸಂಘದ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಉಪಸ್ಥಿತರಿದ್ದರು.


















