ರಾಯಚೂರು – ಕಂದಾಯ ಗ್ರಾಮ ಮತ್ತು ರುದ್ರಭೂಮಿ ಕೆಲಸಗಳಿಗೆ ವೇಳಾಪಟ್ಟಿಯನ್ನು ರಚಿಸಿಕೊಂಡರು ಹೆಚ್ಚಿನ ಆದ್ಯತೆ ನೀಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕಾಟಾಚಾರಕ್ಕೆ ಕೆಲಸ ಮಾಡಿದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೋಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ಅವರು ತಾಲೂಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಗ್ರಾಮ ಮತ್ತು ರುದ್ರಭೂಮಿಯ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,
ರುದ್ರಭೂಮಿಯನ್ನು ಸಂಬಂಧಿಸಿದಂತೆ ವ್ಯವಸ್ಥಿತವಾಗಿ ವೇಳಾಪಟ್ಟಿಯನ್ನು ರಚಿಸಿಕೊಂಡು ತಾಲೂಕು ಮತ್ತು ಗ್ರಾಮಗಳಾದ ವಿಭಾಗ ಮಾಡಿ ಊರಿನಲ್ಲಿ ರುದ್ರ ಭೂಮಿಯಿದ್ದರೆ ಅದು ಪಹಣಿಯಲ್ಲಿ ಇಲ್ಲದಿದ್ದರೆ ಅವುಗಳನ್ನು ಖಚಿತ ಪಡಿಸಿಕೊಳ್ಳಿ, ರುದ್ರಭೂಮಿ ಇಲ್ಲದಂತಹ ಊರುಗಳಲ್ಲಿ ಸರ್ಕಾರದ ಜಾಗ ಸರ್ವೆ ಮಾಡಿ ಅದರಲ್ಲಿ ರುದ್ರಭೂಮಿ ನಿರ್ಮಿಸಿ, ಸರ್ಕಾರಿ ಜಾಗಗಳು ಇಲ್ಲದಿದ್ದರೆ ಖಾಸಗಿ ಜಾಗ ತೆಗೆದುಕೊಂಡು ಸರ್ವೆ ಮಾಡಿ ರುದ್ರಭೂಮಿ ನಿರ್ಮಿಸಿ ನಂತರ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ನಂತರ ಮಾಹಿತಿ ನೀಡಿ ಎಂದು ಆದೇಶ ಮಾಡಿದರು.
ಕಂದಾಯ ಗ್ರಾಮ ಮಾಡಲು ಕಳೆದ ಐದು ದಿನಗಳ ಹಿಂದೆ ಆದೇಶ ನೀಡಿದ್ದೆ ಆದರೆ ನೀವು ಶೂನ್ಯ ಪ್ರಗತಿಯನ್ನು ಸಾಧಿಸಿದ್ದೀರಿ ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ದೇವದುರ್ಗ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಗೊತ್ತಿಲ್ಲ, ಕಾಟಾಚಾರಕ್ಕೆ ಕೆಲಸ ಮಾಡಿ ಉಡಾಫೆ ಉತ್ತರ ನೀಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕಂದಾಯ ಗ್ರಾಮ ಮಾಡಿ ಎಂದು ಕಳೆದ ನವಂಬರ್ ತಿಂಗಳಿನಲ್ಲಿ ತಿಳಿಸಿದ್ದರು ೪ ತಿಂಗಳು ಕಳೆದರೂ ಕೂಡ ಯಾರು ಗಂಭೀರವಾಗಿ ಪರಿಗಣಿಸಿಲ್ಲ, ಕಂದಾಯ ಗ್ರಾಮ ಹಾಗೂ ರುದ್ರಭೂಮಿ ಸಂಬಂಧಪಟ್ಟಂತೆ ಮಧ್ಯಾಹ್ನದ ಒಳಗೆ ವೇಳಾಪಟ್ಟಿಯನ್ನು ರಚಿಸಿಕೊಂಡು ಮಾಹಿತಿ ನೀಡಿ, ತಹಸಿಲ್ದಾರರು ಮತ್ತು ಗ್ರೇಡ್ ೨ ಅಧಿಕಾರಿಗಳಿಂದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮರ್ಪಕವಾಗಿ ಕೆಲಸ ನಿರ್ವಹಿಸಿ. ಇನ್ನೂ ೩-೪ ದಿನಗಳಲ್ಲಿ ಎರಡು ಕೆಲಸಗಳನ್ನು ವೇಳಾಪಟ್ಟಿ ರಚಿಸಿಕೊಂಡ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದರ ಜೊತೆಗೆ ತಾಲೂಕುವಾರು ಇತರ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದರು.