ವಿಜಯಪುರ :ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಉಕ್ರೇನ್‌ನಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದಾಳೆ. ಎಂಬಿಬಿಎಸ್ ವ್ಯಾಸಾಂಗ ಮಾಡಲು ಸಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಉಕ್ರೇನ್‌ನಲ್ಲಿದ್ದಾಳೆ. ಕಳೆದ ಒಂದೂವರೆ ವರ್ಷದ ಹಿಂದೆ ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕೆ ಸುಚಿತ್ರಾ ಹೋಗಿದ್ದಾಳೆ. ಇದೀಗ ಎರಡು ದೇಶದ ಯುದ್ಧ ಘೋಷಣೆಯಿಂದಾಗಿ ಗುಮ್ಮಟನಗರಿ ವಿದ್ಯಾರ್ಥಿನಿಯ ತಂದೆ ಮಲ್ಲನಗೌಡ ಕವಡಿಮಟ್ಟಿ, ತಾಯಿ ಕಮಲಾ ಆತಂಕದಲ್ಲಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ತಮದಡ್ಡಿ ಗ್ರಾಮದವರಾಗಿದ್ದಾರೆ. ಇದೀಗ ನಮ್ಮ ಮಗಳನ್ನು ಸುರಕ್ಷಿತವಾಗಿ ಮರಳಿ ಕರ್ನಾಟಕಕ್ಕೆ ಬರುವಂತೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಸುಚಿತ್ರಾ ತಂದೆ ತಾಯಿ ಮನವಿ ಮಾಡಿದ್ದಾರೆ.