ಆನಂದ ಗಣಚಾರಿ ಕ.ನಿ.ಪ ಸಂಘದ ಖಜಾಂಚಿ ಅವಿರೋಧವಾಗಿ ಆಯ್ಕೆ.
ಇಂಡಿ : ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕು ಖಜಾಂಚಿಯಾಗಿ ಇಂಡಿ ನಗರದ ಆನಂದ ಗಣಾಚಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ಆನಂದ ಗಣಾಚಾರಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದ ಪ್ರಯುಕ್ತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಸಮಿತಿಯ ದೇವೇಂದ್ರ ಹೇಳವರ, ರಾಜು ಕೊಂಡಗೂಳಿ ಘೋಷಿಸಿದರು.


















