56ನೇ ದಿನಕ್ಕೆ ಕಾಲಿಟ್ಟ ಹೋರಾಟ,ವೃತ್ತಿ ರಂಗಭೂಮಿ ಕಲಾವಿದರ ತಂಡ ಭೇಟಿ
ವಿಜಯಪುರ. 56ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಧರಣಿಗೆ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ತಂಡ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಲ್. ಬಿ. ಶೇಖ್ ಅವರು ಮಾತನಾಡಿ “ಕಳೆದ 56 ದಿನಗಳು ಕಲೆದ್ದರೂ, ಸರ್ಕಾರ ಕಣ್ಣು ತೆಗೆದ ನೋಡದೇ ಇರುವುದು ದೂರದುಷ್ಟಕರ ಸಂಗತಿ, ಬಡ ಕಲಾವಿದರು, ನಿರ್ಗತಿಕರಿಗೆ, ಶೋಷಿತ ಜನಾಂಗಕ್ಕೆ ವೈದ್ಯಕೀಯ ಕಾಲೇಜು ತುಂಬಾ ಅವಶ್ಯಕತೆ ಇದ್ದು. ಸರ್ಕಾರಿ ಆಸ್ಪತ್ರೆಯನ್ನು ಬಂಡವಾಲಶಾಹಿಗಳಿಗೆ ಮಾರುತ್ತಿರುವ ವಿಷಯ ನೋವಿನ ಸಂಗತಿ. ಇದನ್ನು ನಾವು ಕಲಾವಿದರು ಖಂಡಿಸುತ್ತೇವೆ. ತಕ್ಷಣ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಕಲಾವಿದರ ತಂಡ ಸಂಪೂರ್ಣವಾಗಿ ಹೋರಾಟದಲ್ಲಿ ಭಾಗವಹಿಸಬೇಕಾಗಿತ್ತೆ” ಎಂದು ಅವರು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಲ್.ಬಿ. ಶೇಖ ಮಾಸ್ತರ, ಶ್ರೀಧರ ಜಿ ಹೆಗಡೆ, ಅಶ್ಫಾಕ ಜಹಾಗಿರದಾರ, ಹಾಸ್ಯ ಕಲಾವಿದರಾದ ಸಿದ್ದು ನಾಲತವಾಡ, ಶ್ರೀಶೈಲ ಬೋರಗಿ, ನಿಜಗುಣಿ ಬೆಂಗಳೂರು, ರುಕ್ಮಿಣಿ ಹೆಗಡೆ, ರಾಜಮ್ಮ ಹೆಗಡೆ, ಆಶಾರಾಣಿ ಬಾಗವಾನ, ನಂದಾ ಹಿರೇಮಠ, ಲಕ್ಷ್ಮಿ ಕಟ್ಟಿಮನಿ, ಸೀಮಾ ಮೈದರಗಿ, ಕಲ್ಪನಾ ಸಾಗರ, ಶಾರದಾ ಪಾಟೀಲ, ಜನ್ನತ್ ಮುಲ್ಲಾ, ಪದ್ಮಾ ಪ್ರಚಂಡೆ, ಚನ್ನಮ್ಮ ಶ್ಯಾಡಲಗೇರಿ, ಶೈಲಜಾ ದೂಧಣಿಕರ, ಜಯಶ್ರೀ ಶೌರಿ, ಲೋಲಮ್ಮ ಬೆಂಗಳೂರು, ಉಮಾ ರಾಣೆಬೆನ್ನೂರ, ಸಪ್ನಾ ಮೇತ್ರಿ, ಬೀಬಿಜಾನ್ ಕಲ್ಲೂರು, ನೀತಾ ಹಿರೇಮಠ, ಅಶೋಕ ಶಿಂಗೆ, ಪ್ರೇಮಾ ಹೊನವಾಡ, ಉಮಾ, ಲಕ್ಷ್ಮೀ ಹೆಗಡೆ, ಭಾಗ್ಯಶ್ರೀ, ಯಮನಾ ಕುಮಾರ ಗಿರಿಸಾಗರ ಸೇರಿದಂತೆ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು



















