ಇಂಡಿಯಲ್ಲಿ ನಿಂತಿದ್ದ ಟ್ರ‍್ಯಾಕ್ಟರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಓರ್ವ ವಿದ್ಯಾರ್ಥಿ ಸಾವು..! ಇಬ್ಬರ ಪರಿಸ್ಥಿತಿ ಚಿಂತಾ ಜನಕ..!
ಇಂಡಿ: ರಸ್ತೆಬದಿ ನಿಂತಿದ್ದ ಟ್ರ‍್ಯಾಕ್ಟರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು ಇಬ್ಬರ ಪರಿಸ್ಥಿತಿ ಚಿಂತಾ ಜನಕವಾಗಿದ್ದು ಚಾಲಕನ ನಿರ್ಲಕ್ಷತನವೇ ಈ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇಂಡಿ ಯಿಂದ ಮಣೂರ ಗ್ರಾಮಕ್ಕೆ ಹೋಗಬೇಕಿದ್ದ ಬಸ್ ಸಾಯಂಕಾಲ ೫:೧೫ ರ ಸುಮಾರಿಗೆ ಪಟ್ಟಣದ ಶ್ರೀನಿವಾಸ ಚಿತ್ರಮಂದಿರದ ಹತ್ತಿರ ರಸ್ತೆ ಪಕ್ಕದಲ್ಲಿ ಫರಸಿ ತುಂಬಿಕೊAಡು ನಿಂತಿದ್ದ ಟ್ರಾö್ಯಕ್ಟರ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಇಂಡಿ ತಾಲೂಕಿನ ಮಣೂರ ಗ್ರಾಮದ ಆನಂದ ಕದಂಬ (೧೭) ವಿದ್ಯಾರ್ಥಿ ಮೃತಪಟ್ಟಿದ್ದು, ಹಿರೇಬೇವನೂರ ಗ್ರಾಮದ ಪವನ ಕೋಳಿ (೧೭) ಹಾಗೂ ಶಂಕರ ಮೇತ್ರಿ ಎಂಬ ವಿದ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿವೆ.
ಪವನ ಕೋಳಿ ಎಂಬುವನಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಶಂಕರ ಮೇತ್ರಿ ವಿದ್ಯಾರ್ಥಿಗೆ ಇಂಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ನಂಬರ್ ಕೆ.ಎ.೨೮ ಎಫ್ ೨೨೫೫, ಟ್ರಾö್ಯಕ್ಟರ್ ನಂಬರ್ ಕೆ.ಎ. ೨೮ ಟಿ.ಎಫ್ ೯೦೩೩ ಗಳನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ಗಾಯಗೊಂಡ ವಿದ್ಯಾರ್ಥಿ ಶಂಕರ ಮೇತ್ರಿ ವಿದ್ಯಾರ್ಥಿಗೆ ಇಂಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



















