ಮುದ್ದೇಬಿಹಾಳ : ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿ ಮಾಡುವಂತೆ ರೈತರು ಮಾಡುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ ಎಂದು ರೈತ ಮುಖಂಡ ಜೆಡಿಎಸ್ ಪಕ್ಷದ ರಾಜ್ಯ ಪರಿಷತ್ತು ಸದಸ್ಯ ಬಸನಗೌಡ ಪಾಟೀಲ್ (ಮುರಾಳ)ಹೇಳಿದರು.
ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಪಡೆಯುತ್ತಿವೆ ಸಕ್ಕರೆ ಜತೆಗೆ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಕಾರ್ಖಾನೆಗಳು, ಕಬ್ಬಿಗೆ ಮಾತ್ರ ಕಡಿಮೆ ದರ ಕೊಡುವುದು ನ್ಯಾಯವಲ್ಲ ಗುಜರಾತ, ಮಹಾರಾಷ್ಟ್ರ ರಾಜ್ಯದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಲಾಗಿದೆ ನಮ್ಮ ಪಕ್ಕದ ನಾಯನೇಗಲಿಯಲ್ಲಿ ಸಹ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ ಆದರೆ ಬಾಲಾಜಿ ಸಕ್ಕರೆ ಕಾರ್ಖಾನೆ ಮಾತ್ರ ಪ್ರತಿ ವರ್ಷವೂ ಕಡಿಮೆ ಬೆಲೆ ನೀಡುತ್ತಾ ಬರುತ್ತಿದೆ.
ರಾಜ್ಯ ಸರಕಾರ ಕೇಂದ್ರ ಸರಕಾರದತ್ತ ಬೆರಳು ಮಾಡುತ್ತದೆ ಈಗಾಗಲೇ ಕೇಂದ್ರ ಸರಕಾರ 3551 ರೂ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಬೇಕು.
ಚುನಾವಣೆಯ ಸಂದರ್ಭದಲ್ಲಿಮಾತ್ರ ರೈತರ ಕಷ್ಟ ಗೊತ್ತಾಗುತ್ತೆ. ಪ್ರಕೃತಿ ವಿಕೋಪದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಯಾವ ಜನಪ್ರತಿನಿಧಿಯೂ ರೈತರ ಬಗ್ಗೆ ಧ್ವನಿ ಎತ್ತುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ,ಸಮಾಜ ಸೇವಕ ಶಾಂತಗೌಡ ಪಾಟೀಲ್ (ನಡಹಳ್ಳಿ) ಮಾತನಾಡಿ ಪ್ರತಿವರ್ಷವೂ ಬಾಲಾಜಿ ಸಕ್ಕರೆ ಕಾರ್ಖಾನೆ ಯವರು ಕಡಿಮೆ ಬೆಲೆ ಏಕೆ ನೀಡುತ್ತಾರೆ? ಕಬ್ಬಿನ ತೂಕದಲ್ಲಿ ಸಹ ಮೋಸ ಮಾಡುತ್ತಾರೆ ಎಂದು ರೈತರು ಆರೋಪಿಸುತ್ತಾರೆ ಪ್ರತಿ ಹಳ್ಳಿಗಳಲ್ಲಿ ಪಕ್ಷದ ಮುಖಂಡರು ಸಿಗುತ್ತಾರೆ ಆದರೆ ರೈತ ಮುಖಂಡರು ಸಿಗುವುದಿಲ್ಲ ಹೀಗಾಗಿ ಪ್ರತಿ ಹಳ್ಳಿಗಳಲ್ಲಿ ರೈತ ಸಂಘಟನೆಗಳು ಸಂಘಗಳು ಹುಟ್ಟಬೇಕು ಕಬ್ಬಿನ ತೂಕ ಮಾಡಲು ರೈತರೇ ವ್ಹೇ ಬ್ರಿಜ್ ಮಾಡಬೇಕು ಇದಕ್ಕೆ ನಾನು ಧನ ಸಹಾಯ ಮಾಡುವುದಾಗಿ ತಿಳಿಸಿದ ಅವರು ಸಕ್ಕರೆ ಕಾರ್ಖಾನೆ ಯವರು ತಮಗೆ ಯಾವ ಪ್ರತಿಸ್ಪರ್ಧಿ ಆಗದಂತೆ ವ್ಯವಸ್ಥೆಯನ್ನು ಮಾಡಿಕೊಂಡ ಕಾರಣ ಅವರು ಹೇಳಿದ ಬೆಲೆ ಗೆ ರೈತರು ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ ಮಾತ್ರವಲ್ಲದೆ ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಕೋಟ್ಯಾಂತರ ರೂ ಚುನಾವಣೆಗೆ ನೀಡಿ ಇಂತಹ ಸಂದರ್ಭದಲ್ಲಿ ಬರದಂತೆ ತಡೆಯುತ್ತಾರೆ ಈ ರೈತ ಹೋರಾಟಕ್ಕೆ ಹಾಲಿ ಮತ್ತು ಮಾಜಿ ಶಾಸಕರು ಬರಬೇಕು ರೈತರ ಸಮಸ್ಯೆ ಆಲಿಸಿ ಕಬ್ಬಿನ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ಮುಖಂಡರಾದ ಸಂಗಣ್ಣ ಬಾಗೇವಾಡಿ, ಅರವಿಂದ ಕುಲಕರ್ಣಿ, ಮಂಜುನಾಥ ಬಡಿಗೇರ,ಸುರೇಶಗೌಡ ಪಡೇಕನೂರ,ಶಿವು ಕನ್ನೊಳ್ಳಿ, ಶಿವನಗೌಡ ಬಿರಾದಾರ, ಮಹೆಬೂಬ ಹಡಲಗೇರಿ,ಗುರುಸಂಗಪ್ಪಗೌಡ ಹಂಡರಗಲ್ಲ,ಆನಂದ ಮುದೂರ, ಮುತ್ತು ಚಲವಾದಿ ಮಾತನಾಡಿ ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ ಸರಕಾರ ರೈತರು ಬೆಳೆದ ಕಬ್ಬಿಗೆ 3500 ಬೆಂಬಲ ಬೆಲೆ ನೀಡಬೇಕು.
ರೈತರ ಹೋರಾಟ ಮೊಟಕುಗೂಳಿಸುವ ಯತ್ನ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಮಾಡುತ್ತಿದ್ದಾರೆ ನಮ್ಮ ಬೇಡಿಕೆ ಈಡೇರುವರಗೆ ಅಹೋರಾತ್ರಿ ಹೋರಾಟ ಮುಂದುವರೆಯುತ್ತದೆ.
ರೈತರ ಹೋರಾಟ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಸಕ್ಕರೆ ಸಚಿವರು ಬರಬೇಕು ನಮ್ಮ ಅಳಲನ್ನು ಆಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಕ್ಷಯ ನಾಡಗೌಡ,ಅಯ್ಯಪ್ಪ ಬಿದರಕುಂದಿ, ಶಿವಾನಂದ ಮಂಕಣಿ,ಸೋಮನೌಡ ಕೋಳೂರು,ಹಣಮಂತರಾಯ ತುಂಬಗಿ,ರಾಜು ತಿಳಿಗೋಳ,ಶರಣು ಗಾಳಿ,ಮಾಳಿಂಗರಾಯ ಗುಬಚಿ, ಪ್ರಭಯ್ಯ ತೆಗ್ಗಿನಮಠ,ಜಗದೀಶ ಗೂಳಿ, ನಿಂಗಣ್ಣ ಅಳ್ಳಗಿ, ಅನಿಲ್ ತಾಳಿಕೋಟೆ, ಸೇರಿದಂತೆ ನೂರಾರು ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ,ರೈತರ ಮೂರನೇ ದಿನದ ಹೋರಾಟದಲ್ಲಿ ಪಾಲ್ಗೊಂಡ ರೈತರಿಗೆ ಊಟ ಉಪಾಹಾರದ ವ್ಯವಸ್ಥೆಯನ್ನು ರೈತ ಮುಖಂಡ ಬಿ ಬಿ ಪಾಟೀಲ್ ಮಾಡಿದರು.