ದುರ್ಬಲರಿಗೆ ಉಚಿತ ಕಾನೂನು ನೆರವು ಅಗತ್ಯ: ನ್ಯಾ. ಅರವಿಂದ ಹಾಗರಗಿ
ವಿಜಯಪುರ- ಸಮಾಜದಲ್ಲಿರುವ ದುರ್ಬಲ ವರ್ಗದವರು, ಬಡವರು, ಅಸಹಾಯಕ ಮಹಿಳೆಯರಿಗೆ ಉಚಿತ ಕಾನೂನು ನೀಡುವದು ಇಂದಿನ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕರ‍್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಅರವಿಂದ ಹಾಗರಗಿ ಅವರು ಪ್ರತಿಪಾದಿಸಿದರು.ಅವರು ಸ್ಥಳೀಯ ಸಿಕ್ಯಾಬ್ ಕಾನೂನು ಮಹಾವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟಿಯ ಕಾನೂನು ಸೇವೆಗಳ ದಿನ’ ಕಾನೂನು ಅರಿವು-ನೆರವು ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಸಂವಿಧಾನದ ೩೯ ಎ ಆರ್ಟಿಕಲ್ ಮೂಲಕ ದೇಶದ ನಾಗರಿಕರಿಗೆ ಉಚಿತ ಕಾನೂನು ನೆರವು ಸಿಗಬೇಕೆಂಬುದು ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ಹಾಗೂ ಇತರ ಮಹನೀಯರ ಆಶಯವಾಗಿತ್ತು. ಅದು ಕಾನೂನು ವಿದ್ಯಾರ್ಥಿಗಳು, ನ್ಯಾಯವಾದಿಗಳು ನ್ಯಾಯಾಂಗ ವ್ಯವಸ್ಥೆಯ ಮೂಲಕ ಸಾಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಮೂರುವರ್ಷಗಳಲ್ಲಿ ೪೪ ಲಕ್ಷ ಜನರಿಗೆ ದೇಶದ ಉದ್ದಗಲಕ್ಕೂ ಉಚಿತ ಕಾನೂನು ನೆರವು ನೀಡಿದ್ದು ಒಂದು ಐತಿಹಾಸಿಕ ದಾಖಲೆಯಾಗಿದೆ.
ಕಾನೂನು ಮಹಾವಿದ್ಯಾಲಯಗಳ ‘ಲೀಗಲ್ ಕ್ಲಿನಿಕ್’ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಪರ್ಕ ಹೊಂದಿ ಸಮಾಜದ ಕೆಳವರ್ಗಕ್ಕೆ ಕಾನೂನು ನೆರವು ನೀಡುವ ಸೇತುವೆ ಹಾಗೆ ಕೆಲಸ ಮಾಡಬೇಕೆಂದು ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ನ್ಯಾಯವಾದಿಗಳ ಸಂಘ (ಬಾರ್ ಅಸೋಶಿಯೇಶನ್) ಅಧ್ಯಕ್ಷರಾದ ಡಿ.ಜಿ. ಬಿರಾದಾರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾನೂನು ಶಿಕ್ಷಣಕ್ಕೆ ಮಹತ್ವ ದೊರೆಯುತ್ತಿದ್ದು, ಪ್ರತಿಭಾವಂತರು ವಕೀಲರಾದರೆ ನ್ಯಾಯ ವಿತರಣೆ ಸಮರ್ಪಕವಾಗುತ್ತದೆ ಎಂದರು. ಸರ್ಕಾರಿ ವಕೀಲರು ಹಾಗೂ ನ್ಯಾಯಾಧೀಶ ಹುದ್ದೆಗಳಿಗೆ ಐದು ವರ್ಷದ ಕಾನೂನು ಶಿಕ್ಷಣ ನೆರವಾಗಲಿದೆ ಎಂದರು. ಸಮಾಜದಲ್ಲಿ ಯುವಜನರು ಮದ್ಯಪಾನ, ಮಾದಕವಸ್ತು÷ ಸಂಬAಧಿ ಅಪರಾಧ ತಡೆಗಟ್ಟಲು ಜಾಗ್ರತರಾಗಬೇಕೆಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕರ‍್ಯದರ್ಶಿಗಳಾದ ಎ.ಎಸ್.ಪಾಟೀಲ ಅವರು ಮಾತನಾಡಿ ಭಾರತೀಯ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು ನಿಜವಾಗಿಯೂ ಅನ್ಯಾಯವಾದ ವ್ಯಕ್ತಿಗಳಿಗೆ ನ್ಯಾಯ ದೊರಕಿಸಲು ಗರಿಷ್ಠ ಪ್ರಮಾಣದಲ್ಲಿ ಎಲ್ಲ ಹಂತದ ನ್ಯಾಯಾಲಯಗಳು ಶ್ರಮಿಸುತ್ತಿವೆ ಎಂದು ಶ್ಲಾಘಿಸಿದರು.ಸಮಾರಂಭದ ವೇದಿಕೆಯ ಮೇಲೆ ಸಿಕ್ಯಾಬ್ ಎ.ಆರ್.ಎಸ್.ಐ ಮಹಿಳಾ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎಚ್.ಕೆ.ಯಡಹಳ್ಳಿ, ಮಲಿಕ್ ಸಂದಲ್ ಪಾಲಿಟೆಕ್ನಿಕ್ ಪ್ರಾಚರ‍್ಯ ಇರ್ಫಾನ್ ಎಮ್.ಎಚ್. ಕಾನೂನು ಮಹಾವಿದ್ಯಾಲಯದ ಪ್ರಾಚರ‍್ಯ ಡಾ. ಮಲ್ಲಿಕಾರ್ಜುನ ಎ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಮೇತ್ರಿ, ಪ್ರೊ. ಎಮ್.ಎಸ್. ಕಟಾರೆ, ಡಾ. ಸಾದಿಕಾ ದಫೇದಾರ, ಕಚೇರಿ ಸಿಬ್ಬಂದಿಗಳಾದ ಶೌಕತ್ ಅಲಿ ಎಲಿಗಾರ, ಅಸ್ಲಮ್ ಮುಧೋಳ ಉಪಸ್ಥಿತರಿದ್ದರು.



















