ಇಂಡಿಯಲ್ಲಿ ರೈತ ಸಂಘಟನೆ ಪ್ರತಿಭಟನೆ ಸ್ಥಳಕ್ಕೆ ತಹಶಿಲ್ದಾರ ಬೇಟಿ ನೀಡಿ ಹೇಳಿದ್ದೇನು..?
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತೀ ಟನ್ ಕಬ್ಬಿಗೆ ೪ ಸಾವಿರ ರೂಪಾಯಿ ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ರೈತ ಸಂಘಟನೆ ನಡೆಸುತ್ತಿರುವ ಧರಣಿಗೆ ಶಿರಶ್ಯಾಡ ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಬೆಂಬಲ ಸೂಚಿಸಿದ್ದು, ರೈತರು ನ್ಯಾಯಯುತ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸರಕಾರ ರೈತರ ಬೇಡಿಕೆಗೆ ಮಣಿದು ದರ ನಿಗದಿಗೊಳಿಸಬೇಕು. ದೇಶಕ್ಕೆ ಅನ್ನ ನೀಡುವ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ನಾವು ಸಹ ಬೆಂಬಲ ನೀಡುತ್ತಿದ್ದೇವೆ. ಶೀಘ್ರವೇ ಟನ್ ಕಬ್ಬಿಗೆ ೪ ಸಾವಿರ ದರ ನಿಗದಿಗೊಳಿಸಿ, ಸಿಹಿ ಕಬ್ಬಿಗೆ ರೈತರ ಬಾಳು ಕಹಿಯಾಗುತ್ತಿದ್ದು ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲಾ ಮಠಾಧೀಶರ ಜೊತೆ ಚರ್ಚಿಸಿ ಮಠಾಧೀಶರು ಹೋರಾಟದಲ್ಲಿ ಪಾಲ್ಗೊಳ್ಳುವದಾಗಿ ಎಚ್ಚರಿಸಿದರು.
ಕರವೇ ಬೆಂಬಲ:ರೈತರ ಧರಣಿಗೆ ಕರವೇ ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಬಾಳು ಮುಳಜಿ ಮಾತನಾಡಿ, ರೈತರ ನ್ಯಾಯುತ ಬೇಡಿಕೆ ಈಡೇರುವವರೆಗೂ ನಾವೂ ಸಹ ಧರಣಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತೇವೆ. ಸರಕಾರ ಕೂಡಲೆ ರೈತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ ಭೇಟಿ:ಧರಣಿ ಸ್ಥಳಕ್ಕೆ ತಹಸೀಲ್ದಾರ ಬಿ.ಎಸ್.ಕಡಕಬಾವಿಯವರು ಭೇಟಿ ನೀಡಿ ಮಾತನಾಡಿ, ನಿನ್ನೆ ೩ ರಂದು ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ರೈತರೊಂದಿಗೆ ಸಭೆ ನಡೆಸಿ ದರ ಘೋಷಿಸಿ ಕಾರ್ಖಾನೆ ಆರಂಭಿಸಿ ಎಂದು ತಿಳಿಸಿದ್ದಾರೆ. ಎರಡು ದಿನದಲ್ಲಿ ಬೆಲೆ ಕುರಿತು ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದ್ದರಿಂದ ರೈತರು ಅÃರ್ದಿಷ್ಟ ಧರಣಿ ಹಿಂದೆ ಪಡೆಯಲು ವಿನಂತಿಸಿದರು.
ಇದಕ್ಕೆ ಒಪ್ಪದ ರೈತರು ಬೆಲೆ ಘೋಷಣೆಯಾಗುವವರೆಗೆ ಹೋರಾಟ ಮುಂದುವರೆಸುವದಾಗಿ ಪಟ್ಟು ಹಿಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ, ಪ್ರಗತಿಪರ ರೈತರಾದ ಮಾಳು ಗುಡ್ಲ, ಮಲ್ಲು ಗುಡ್ಲ ಮಾತನಾಡಿದರು.
ಟ್ರಾö್ಯಕ್ಟರ್ ತಡೆದು ಪ್ರತಿಭಟನೆ.
ಬಸವೇಶ್ವರ ವೃತ್ತದಲ್ಲಿ ಕಬ್ಬು ತುಂಬಿಕೊAಡು ಬರುತ್ತಿರುವ ಟ್ರಾö್ಯಕ್ಟರ್ ತಡೆದು ರೈತರು ಪ್ರತಿಭಟಿಸಿದರು. ಶಹರ ಠಾಣೆಯ ಸಿಪಿಐ ಪ್ರದೀಪ ಭಿಸೆ ರೈತರ ಮನವೊಲಿಸಿ ಟ್ರಾö್ಯಕ್ಟರ್ ಸಾಗಾಟಕ್ಕೆ ಅನುಕೂಲ ಮಾಡಿಕೊಟ್ಟ ಘಟನೆ ನಡೆಯಿತು.
ಧರಣಿಯಲ್ಲಿ ಟಿ.ಆರ್.ಆಸಂಗಿ, ಹಣಮಂತ ಗುಡ್ಲ, ದತ್ತು ಸಾವಕಾರ, ಗಿರಿಮಲ್ಲಗೌಡ ಬಿರಾದಾರ, ಅದೃಶ್ಯಪ್ಪ ವಾಲಿ, ಶ್ರೀಶೈಲ ನಾಟಿಕಾರ, ಕಾಮಗೊಂಡ ಒಡೆಯರ, ಭೀಮನಗೌಡ ಪಾಟೀಲ, ಅಶೋಕ ಅಕಲಾದಿ, ಬಾಗೇಶ ಮಲಘಾಣ, ಪ್ರಶಾಂತ ಲಾಳಸಂಗಿ, ಶಾಂತು ಕಂಬಾರ, ಸಚೀನ ನಾವಿ , ಸಿದ್ದಪ್ಪ ತಳವಾರ, ಮಲ್ಲಿಕಾರ್ಜುನ ಹಾವಿನಾಳಮಠ, ಚಂದ್ರಶೇಖರ ಪಾಸೋಡಿ, ಸೇರಿದಂತೆ ನೂರಾರು ರೈತರು ಪಾಳ್ಗೊಂಡಿದ್ದರು.
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ನಡೆದ ಹೋರಾಟ ಸ್ಥಳಕ್ಕೆ ತಹಸೀಲ್ದಾರ ಭೇಟಿ ಮಾತನಾಡಿದರು.

ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ನಡೆದ ಹೋರಾಟ ಸ್ಥಳಕ್ಕೆ ಶಿರಶ್ಯಾಡದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಭೇಟಿ ನೀಡಿ ಬೆಂಬಲ ಸೂಚಿಸಿದರು.
ಇಂಡಿ: ಬಸವೇಶ್ವರ ವೃತ್ತದಲ್ಲಿ ಕಬ್ಬು ತುಂಬಿಕೊAಡು ಬರುತ್ತಿರುವ ಟ್ರಾö್ಯಕ್ಟರ್ ತಡೆದು ರೈತರು ಪ್ರತಿಭಟಿಸಿದರು.











