ಇಂಡಿ : ಪಟ್ಟಣದ ಬೇಕರಿ ಮಾಲೀಕನ ಕಿಡ್ನ್ಯಾಪ್ ಪ್ರಕರಣದಲ್ಲಿ ಐವರು ಆರೋಪಿಗಳು ಇಂಡಿ ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ರಾಮಚಂದ್ರ ಅಪ್ಪು ಜಾದವ್, ಷಣ್ಮುಖ ಅರ್ಜುನ ಕಾಂಬ್ಳೆ, ರಿಯಾಜ್ ಲಾಡ್ಲೆ ಮಶಾಕ್ ಮುಜಾವರ್, ಉತ್ತಮ್ ಸದಾಶಿವ ಹೋಕುಳೆ, ದಿಲೀಪ್ ಭೀಮಾಶಂಕರ ಗಾಡ್ಗೆ ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳು ಮೋಪಸಿಂಗ್ ಪರಮಾರ್‌ನ್ನು ಕೇವಲ 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೇ, ಆರೋಪಿಗಳು ಕಿಡ್ನ್ಯಾಪ್‌ಗೆ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಇಂಡಿ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆಯಲ್ಲಿ ಎಸ್ಪಿ ಎಚ್ ಡಿ ಆನಂದಕುಮಾರ ಮಾತಾನಾಡಿ, ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಪ್ರಕರಣವನ್ನು ದಾಖಲಿಸಿರಲಿಲ್ಲ. ಪ್ರಕರಣವನ್ನ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ಪತ್ತೆಗೆ ಪೊಲೀಸರ ತಂಡವನ್ನು ನಿಯೋಜನೆ ಜಾಲವನ್ನು ಬಿಸಲಾಗಿತ್ತು. ಇಡಿರಾತ್ರಿ ಆರೋಪಿಗಳ ಪೊನ್ ಕಾಲ್ ಡಿಟೇಲ್ಸ್ ಕಲೆಹಾಕಿ, ಆರೋಪಿಗಳು ಬೇಕರಿ ಮಾಲೀಕನ ಹೆಂಡತಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ವಿಜಯಪುರ ಜಿಲ್ಲೆಯ ಪೊಲೀಸರು ಕಾರ್ಯಪ್ರವೃತ್ತರಾಗಿ 6 ಗಂಟೆಗಳಲ್ಲಿ ಕಿಡ್ನಾಪರ್ಸ್ಗಳನ್ನು ಹಿಡಿದಿದ್ದಾರೆ. ಸಧ್ಯ ಬೇಕರಿ ಮಾಲೀಕನನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈಗಾಗಲೇ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬನ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಆನಂದ ಕುಮಾರ್ ಹೇಳಿದ್ದಾರೆ. ರೌಡಿಶೀಟರ್‌ಗಳು ಬಾಲ್ ಬಿಚ್ಚದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲದೇ, ಈ ಪ್ರಕರಣದ ಆರೋಪಿಗಳಿಗೆ ಮುಂದೆ ಇಂತಹ ಕೆಲಸಕ್ಕೆ ಕೈ ಹಾಕದಂತೆ ಪಾಠ ಕಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಕ್ರಿಮಿನಲ್ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾಗಿದ್ದರು ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಹೇಳಿದರು.
ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ || ರಾಮ ಎಲ್ ಅರಸಿದ್ದಿ , ಡಿ ವಾಯ್ ಎಸ್ ಪಿ ಶ್ರೀಧರ ದೊಡ್ಡಿ, ನಗರ ಸಿಪಿಐ ಭೀಮನಗೌಡ ಬಿರಾದಾರ, ಗ್ರಾಮೀಣ ಸಿಪಿಐ ರಾಜಶೇಖರ ಬಡದೇಸಾರ, ಪಿಎಸ್ ಐ ಮಾಳಪ್ಪ ಪೂಜಾರಿ ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರು.