ಲಿಂಗಸೂಗೂರು: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಟ್ಟಣದ ಗುರು ಭವನದಲ್ಲಿ ವಿಶ್ವ ಚಿಂತನ ಹಾಗೂ ಸ್ಕೌಟರ್ಸ್ ಮತ್ತು ಗೈಡರ್ಸ್ ಉದ್ಘಾಟನಾ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮದಲ್ಲಿ ಕೆಸರಹಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಖ್ಯೋಪಾದ್ಯಾಯರಾದ ರಾಜುನಗೌಡ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಲಯದ ಮುಂದೆ ಇರುವ ಕಸವನ್ನು ಸ್ವಚ್ಛತೆ ಮಾಡಿದರು.
ವಿವಿಧ ಶಾಲೆಗಳಿಂದ ಬಂದ ಮಕ್ಕಳೊಂದಿಗೆ ಶಿಕ್ಷಕರು, ಸ್ಕೌಟ್ಸ್-ಗೈಡ್ಸ್ ಟೀಮ್, ಅಧಿಕಾರಿ ವರ್ಗದವರ ಸಮ್ಮುಖದಲ್ಲಿ ಶ್ರಮದಾನ ಮಾಡಲಾಯಿತು.