ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ರಮೇಶ ಗುಬ್ಬೇವಾಡ ರವರ ನೇತೃತ್ವದಲ್ಲಿ ‘ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ವೇಳೆ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಗರದ ಡಿ.ದೇವರಾಜ ಅರಸು ವೃತ್ತದಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಮಾತನಾಡಿ ಇವತ್ತು ಮತಗಳ್ಳತನ ಮಾಡುವುದರ ಮೂಲಕ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಹಾಗೂ ನಮ್ಮ ವಿಜಯಪುರ ನಗರದಲ್ಲಿಯೂ ಕೂಡ ಮತಗಳ್ಳತನ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ರಮೇಶ ಗುಬ್ಬೇವಾಡ ಮಾತನಾಡಿ ಸುಪ್ರೀಂ ಕೋರ್ಟ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವದು ಅತ್ಯಂತ ಹೀನಕೃತ್ಯ. ಇದು ಒಬ್ಬ ವ್ಯಕ್ತಿಯ ಅವಮಾನ ಅಲ್ಲ ನಮ್ಮ ದೇಶದ ನ್ಯಾಯಾಂಗಕ್ಕೆ ಆದ ಅವಮಾನ. ಸಂವಿಧಾನದ ಮೌಲ್ಯಗಳು ಮತ್ತು ಕಾನೂನಿನ ಶ್ರೇಷ್ಠತೆಯ ಮೇಲಿನ ದಾಳಿಯಾಗಿದೆ. ಆದ್ದರಿಂದ ತಪ್ಪಿತಸ್ಥ ವಕೀಲನ ಮೇಲೆ ಕಾನೂನು ರೀತಿ ಕಠಿಣಕ್ರಮ ಆಗಬೇಕೆಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಶಕೀಲ ಬಾಗಮಾರೆ ಮಾತನಾಡಿದರು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಚಾಂದಸಾಬ ಗಡಗಲಾವ, ದೇಸು ಚವ್ಹಾಣ, ವಸಂತ ಹೊನಮೊಡೆ, ರಾಕೇಶ ಕಲ್ಲೂರ, ಮಹಾದೇವ ಛಲವಾದಿ, ಕೃಷ್ಣಾ ಲಮಾಣಿ, ಕೃಷ್ಣಾ ಕಾಮಟೆ, ಮಲ್ಲಿಕಾರ್ಜುನ ಮಡ್ಡಿಮನಿ, ಮುತ್ತು ಬತ್ತಾಸೆ, ಪರಶುರಾಮ ಜಮಖಂಡಿ, ವಿಠ್ಠಲ ಸಂದಿಮನಿ, ಮಹಾದೇವ ಲಿಂಗದಳ್ಳಿ, ಬಸವರಾಜ ಛಲವಾದಿ, ಮಲ್ಲು, ಭಾರತಿ ಎಂ. ಹಡಪದ, ಹರೀಶ ಕೌಲಗಿ, ಕಣಮುಚನಾಳ, ಧರ್ಮರಾಜ ಹೊಸೂರ, ಸರ್ಫರಾಜ ಅಗಸಬಾಳ, ಲಕ್ಷಿö್ಮ ಕ್ಷೀರಸಾಗರ, ಗುಲಾಬ ಚವ್ಹಾಣ, ಅಬಿದ ಇಲಕಲ್, ಬಿ.ಎಂ. ಮಕ್ತೇದಾರ, ಹಮಿದಾ ಪಟೇಲ, ಸುನಂದಾ ಯಂಪೂರೆ, ರೇವಪ್ಪ ಬತ್ತಾಸೆ, ಸಿದ್ದು ಹಿರೇನಾಯಕ, ವೆಂಕಟೇಶ ಕಲಾಲ, ಮಾನಿಂಗ ಜವನರ, ಪರಸು ಡೊಳ್ಳಿ, ಲೋಕೇಶ ಜವನರ, ನದಾಫ, ಎಸ್.ಎಂ. ನಾಗಠಾಣ ಮುಂತಾದವರು ಉಪಸ್ಥಿತರಿದ್ದರು.