೧೩ ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ
ವಿಜಯಪುರ. ೧೩ ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಗೆ ಆಗಮಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ರವಿಕುಮಾರ್ ರವರು ಮಾತನಾಡುತ್ತಾ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ. ವೈದ್ಯಕೀಯ ಕಾಲೇಜನ್ನು ಖಾಸಗೀಯವರಿಗೆ ಮಾರಾಟ ಮಾಡುವುದರ ಜೊತೆಗೆ, ವೈದ್ಯಕೀಯ ಸೀಟುಗಳನ್ನು ಮುಂದೆ ಮಾರಿಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದನಗೌಡ ಪಾಟೀಲ ರವರು ಮಾತನಾಡುತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಡ ಮತ್ತು ರೈತ ಹಿಂದುಳಿದ, ದಲಿತ ಮಕ್ಕಳು ಒದಲು ಸಾಧ್ಯವಾಗುವುದಿಲ್ಲ. ಈ ದೇಶದ ಬೆನ್ನಲುಬಾಗಿರುವ ರೈತರ ಮಕ್ಕಳು ಕೂಡ ಉನ್ನತ ಶಿಕ್ಷಣವನ್ನು ಓದಲು ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ ಎಂದು ಹೇಳಿದರು. ನಮ್ಮ ಜಿಲ್ಲೆಯ ರಾಜ್ಯದ ಎಲ್ಲಾ ರೈತರು ನಿಮ್ಮ ಹೋರಾಟದೊಂದಿಗೆ ಇದ್ದೇವೆ ಎಂದು ಕರೆ ನೀಡಿದರು.
ಕರ್ನಾಟಕ ಜನ ಆರೋಗ್ಯ ಚಳುವಳಿಯ ಟೀನಾ ಜೇವಿಯರ್ ಮಾತನಾಡುತ್ತಾ ಸರ್ಕಾರ ವೈದ್ಯಕೀಯ ಕಾಲೇಜನ್ನು ಖಾಸಗೀಯವರಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ನಮ್ಮ ಜನ ಆರೋಗ್ಯ ಚಳುವಳಿಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಹೋರಾಟದ ಜೊತೆ ನಾವಿರುತ್ತೇವೆ ಎಂದು ಕರೆ ನೀಡಿದರು.ಆಮ್ ಆದ್ಮಿ ಪಕ್ಷದ ಜಿಲ್ಲಾ, ಮುದ್ದೆಬಿಹಾಳ, ದೇವರ ಹಿಪ್ಪರಗಿ ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಕಾರ್ಯಕರ್ತರಾದ ವಿನಾಯಕ ಐಬಾಳ, ಬಾಬು ಬಿಜಾಪುರ, ಮೀರಸಾಬ ದಳವಾಯಿ, ಪೀರಸಾಬ ವಾಲೀಕರ, ಅವಿನಾಶ ಐಹೊಳೆ, ಸಕ್ರಿಯವಾಗಿ ಈ ಧರಣಿಯಲ್ಲಿ ಭಾಗವಹಿಸಿದ್ದರು.
ಹೋರಾಟ ಸಮಿತಿ ಸದಸ್ಯರುಗಳಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅಪ್ಪಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಸುರೇಶ ಬಿಜಾಪುರ, ಸುರೇಶ್ ಜೀಬಿ,ಲಕ್ಷö್ಮಣ ಹಂದ್ರಾಳ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಹೆಚ್ ಟಿ, ಅಬ್ದುಲ ರಹಮಾನ್ ನಾಸಿರ್, ಜ್ಯೋತಿ ಮಿಣಜಗಿ, ಸಿದ್ದರಾಮ ಹಳ್ಳೂರ, ಜಯದೇವ ಸೂರ್ಯವಂಶಿ, ಮಲ್ಲಿಕಾರ್ಜುನ ಹೆಚ್ ಟಿ, ಶಿವಬಾಳಮ್ಮ ಕೊಂಡಗೂಳಿ, ದಸ್ತಗಿರಿ ಉಕ್ಕಲಿ, ಮಲ್ಲಿಕಾರ್ಜುನ ಕೆಂಗನಾಳ, ಗಿರೀಶ್ ಕಲಘಟಗಿ, ಕಾಮಿನಿ ಕಸಬ, ಮೀನಾಕ್ಷಿ ಸಿಂಗೆ, ಲಕ್ಷö್ಮಣ ಕಂಬಾಗಿ, ಸಿದ್ದನಗೌಡ ಪಾಟಿಲ, ಬಾಬುರಾವ ಬೀರಕಬ್ಬಿ, ಅಕ್ರಮ ಮಾಶಳಕರ, ಸಿದ್ರಾಮಯ್ಯ ಹಿರೇಮಠ, ಬಸವರಾಜ ಸುತ್ತುಗುಂಡಿ, ಶಿವಾನಂದ ಸುತ್ತುಗುಂಡಿ, ರಮೇಶ ಜಂಬಗಿ, ಗುರಪ್ಪ ತಳವಾರ, ಕಾಶಿಂಸಾಬ್ ನದಾಪ, ಸಾತಪ್ಪ ಇಂಡಿ ರಾಜೇಶ ನದಾಪ, ಅಮ್ಮಾಗಿ ಉಕ್ಕಲಿ, ಮೆಹಬೂಬ ಸಾಬ ಮುಲ್ಲಾ, ಜಬೀನಾ ಅಥಣಿ, ಬೋಗೇಶ್ ಸೋಲಾಪುರ್, ಗೀತಾ ಎಚ್, ಕಾವೇರಿ ರಜಪೂತ, ನೀಲಾಂಬಿಕಾ ಬಿರಾದರ, ಮುಂತಾದವರು ಭಾಗವಹಿಸಿದ್ದರು.