ತಳವಾರ ಸಮಾಜಕ್ಕೆ ದೊರೆತ ಸಮೀಕ್ಷೆಯ ಸುವರ್ಣಾವಕಾಶ ಕೈ ಚಲ್ಲಬೇಡಿ : ಅಧ್ಯಕ್ಷ ರೆವಣ್ಣ ಹತ್ತಳ್ಳಿ
ಇಂಡಿ :ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ , ತಳವಾರ ಸಮಾಜಕ್ಕೆ ಸಿಕ್ಕ ಸುವರ್ಣ ಅವಕಾಶ ಕೈ ಚೆಲ್ಲಬೇಡಿ ಎಂದು ಸಮಾಜ ಬಂದುಗಳಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆ ಕಾಣುತ್ತಿದ್ದೆವೆ. ಆದರೆ ಪ್ರಬಲ ಸಮುದಾಯದಗಳು ಸಮೀಕ್ಷೆಯಲ್ಲಿ ವಿಶೇಷವಾಗಿ ಕಾಳಜಿವಹಿಸಿ ತಮ್ಮ ತಮ್ಮ ಸಮುದಾಯದ ಹಿತರಕ್ಷಣೆ ಮಾಡುತ್ತಿದ್ದಾರೆ. ಅದರಂತೆ ನಮ್ಮ ತಳವಾರ ಸಮಾಜದ ಬಂಧುಗಳು ನಮ್ಮ ಸಮಾಜದ ಹಿರಿಯ ಮುಖಂಡ ಮಾಜಿ ಶಾಸಕ ಶರಣಪ್ಪ ಸುಣಗಾರ, ಇಂಡಿ ತಾಲ್ಲೂಕು ತಳವಾರ & ಪರಿವಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಧರ್ಮರಾಜ ವಾಲಿಕಾರ ಹಾಗೂ ನಮ್ಮ ಸಮಾಜದ ಮುಖಂಡರು ಹೇಳಿದಂತೆ ನಾವು ಸಮೀಕ್ಷೆಯಲ್ಲಿ ವಿಶೇಷವಾಗಿ ಪಾಲ್ಗೊಂಡು ಯಾವುದೇ ವ್ಯಕ್ತಿ ಮತ್ತು ಕುಟುಂಬ ಹೊರಗೆ ಉಳಿದಂತೆ ನೋಡಿಕೊಳ್ಳಬೇಕು. ಈ ಹಿಂದಿನ ಸಮೀಕ್ಷೆಯಲ್ಲಿ ನಮ್ಮ ಸಮುದಾಯ ದಾರಿ ತಪ್ಪಿದ್ದು ನಮ್ಮ ಜನರಿಗೆ ಗೊತ್ತಿದೆ. ಆದರೆ ಈ ಬಾರಿ ದಾರಿ ತಪ್ಪು ಬಾರದು, ಅದಕ್ಕಾಗಿ ಅನುಬಂಧ ‘ಸಿ’ ಕಾಲಂ 09- ಮುಖ್ಯ ಜಾತಿ ತಳವಾರ ಕೊಡ್ ಸಂಖ್ಯೆ -C-38.13, ಕಾಲಂ10 ಮತ್ತು 11 ಅನ್ವಯಿಸುವುದಿಲ್ಲ, ಕಾಲಂ-12ರಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದಿರಾ?- ಹೌದು ಎಂದು, ಕಾಲಂ 30 ರಲ್ಲಿ ಕುಲಕಸುಬು- ತಳವಾರ-ಕೊಡ್ ಸಂಖ್ಯೆ- 64 ಎಂದು ಬರೆಯಿಸಿ.ಯಾವುದೇ ಕಾರಣಕ್ಕೂ ಒಂದು ಕುಟುಂಬಕ್ಕೆ ಒಂದೇ ಜಾತಿ ಸ್ವಷ್ಟವಾಗಿ ಬರೆಯಿಸಿ. ಕುಟುಂಬಕ್ಕೆಎರಡು ಜಾತಿ ಬರೆಸಿದರೆ ನಿಮ್ಮ ಮಾಹಿತಿ ಅಸಿಂಧು ವಾಗುತ್ತದೆ ಎಂದು ಹೇಳಿದರು. ಇನ್ನೂ ವಿಶೇಷವಾಗಿ ನನ್ನ ಅಥವಾ ನಮ್ಮ ಕುಟುಂಬದ ಶಾಲಾ ದಾಖಲೆಯಲ್ಲಿ ಜಾತಿ ತಪ್ಪಾಗಿದೆ, ಅದಲು ಬದಲಾಗಿದೆ ಎಂದು ಗೊಂದಲ ಮಾಡಿಕೊಳ್ಳದೆ ಮುಖ್ಯ ಜಾತಿ ತಳವಾರ ಎಂದು ಬರೆಸಲು ಮನವಿ ಮಾಡಿಕೊಳ್ಳುತ್ತೆನೆ ಎಂದು ಹೇಳಿದರು.
