ವಿಜಯಪುರ| ವಿಶ್ವ ರೇಬೀಸ್ ದಿನ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ , ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ಇಂದು ಸೋಮವಾರ ವಿಶ್ವ ರೇಬೀಸ್ ದಿನ ಆಚರಿಸಲಾಯಿತು.
ಈ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದ ಅಗದತಂತ್ರ ವಿಭಾಗದಿಂದ ಏರ್ಪಡಿಸಲಾಗಿದ್ದು ಜನಸಾಮಾನ್ಯರಲ್ಲಿ ರೇಬಿಸ್ ವೈರಾಣು ಹರಡುವ ವಿಧಾನ, ರೋಗ ಪೀಡಿತ ಸಾಕಿದ ನಾಯಿಗಳಿಂದ ಹಾಗೂ ಬೀದಿ ನಾಯಿಗಳಿಂದ ಕೆಲವು ಬಾರಿ ಎದುರಾಗುವ ಪ್ರಾಣಾಪಾಯದ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಯಿತು. ಈ ಅಭಿಯಾನದಲ್ಲಿ ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
ಅಷ್ಟೇ ಅಲ್ಲ, ಮಹಾವಿದ್ಯಾಲಯದ ಆವರಣದಿಂದ ನಗರ ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ ವೃತ್ತದವರೆಗೆ ಜಾಥಾದಲ್ಲಿ ಸಂಚರಿಸಿ ಬೀದಿ ನಾಯಿಗಳ ಕಡಿತ, ಮುನ್ನೆಚ್ಚರಿಕೆ, ಲಕ್ಷಣ, ಪ್ರಥಮ ಚಿಕಿತ್ಸೆ, ಉಪಚಾರ ಕುರಿತು ವೈದ್ಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.
ಜನ ಸಾಮಾನ್ಯರಲ್ಲಿ ರೇಬಿಸ್ ಮುಕ್ತ ಭಾರತ ಎಂಬುವುದರ ಬಗ್ಗೆ ಅರಿವು ಮೂಡಿಸಲಾಯಿತು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ, ಸಹಾಯಕ ಪ್ರಾದ್ಯಾಪಕ ಡಾ. ದಾಮೋದರ ನಾಯಕ, ಡಾ. ಶ್ವೇತಾ ನಿಡಗುಂದಿ ಉಪಸ್ಥಿತರಿದ್ದರು.
BLDEA AVS World Rabbis Day Celebration
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ , ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ವಿಶ್ವ ರೇಬೀಸ್ ದಿನ ಅಂಗವಾಗಿ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಡಾ. ಮಲ್ಲಮ್ಮ ಬಿರಾದಾರ, ಡಾ. ದಾಮೋದರ ನಾಯಕ, ಡಾ. ಶ್ವೇತಾ ನಿಡಗುಂದಿ, ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.