ಅಫಜಲಪುರ: ಅಫಜಲಪುರ ನಗರದಲ್ಲಿ ಮಾರ್ಚ್ 6 ರಂದು ತಾಲೂಕ ಜೆಡಿಎಸ್ ಘಟಕದ ವತಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಉದ್ಘಾಟಿಸಿಲಿದ್ದಾರೆ ಎಂದು ಜೆ.ಡಿ.ಎಸ್.ಮುಖಂಡ ಸಾಮಾಜೀಕ ಹೋರಾಟಗಾರ ಶಿವಕುಮಾರ ನಾಟೀಕಾರ ಹೇಳಿದರು.
ಅಫಜಲಪುರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ಈ ಸಮಾವೇಶ ಪ್ರಮುಖ ಉದ್ದೇಶ ತಾಲೂಕಿನ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ಮತ್ತು ಈ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಮೂಲಕ ಭದ್ರವಾಗಿ ಕಟ್ಟಲು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ನೀರಾವರಿ ಯೋಜನೆ ಕುರಿತು, ಅನೇಕ ವಿಷಯ ಕುರಿತು ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ ಎಂದು ವಿವರಿಸಿದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರವರು ಚುನಾವಣೆ ಸಂದರ್ಭದಲ್ಲಿ ಕ್ಷೇತ್ರವನ್ನು ಹಸಿರು ಕ್ರಾಂತಿ ಮಾಡಿದ್ದೇವೆ ಎಂದು ಹೇಳವರು. ತಾಲೂಕಿನಲ್ಲಿ ಎಷ್ಟು ರೈತರಿಗೆ ಸಮರ್ಪಕವಾಗಿ ನೀರು ಲಭಿಸಿದೆ ಎನ್ನುವುದು ಕ್ಷೇತ್ರದ ರೈತ ವರ್ಗಕ್ಕೆ ಗೊತ್ತಿದೆ ಎಂದರು.
ಅವೈಜ್ಞಾನಿಕದಿಂದ ನೀರಾವರಿ ಕಾಲುವೆಗಳು ನಿರ್ಮಾಣವಾಗಿದ್ದರಿಂದ ಸಂಪೂರ್ಣ ಹಾಳಾಗಿವೆ. ರೈತರ ಜಮೀನಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ನೀರಾವರಿ ಯೋಜನೆಗೆ ಕೋಟ್ಯಾಂತರ ರೂಪಾಯಿ ಖರ್ಚ ಆಗಿದೆ. ಈ ಕುರಿತು ಗುತ್ತೇದಾರ ಅವರು ಏಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಶಾಸಕ ಎಂ.ವಾಯ್.ಪಾಟೀಲರು ಕೂಡ ನೀರಾವರಿ ಕುರಿತು ಧ್ವನಿ ಎತ್ತದೆ ಮೌನವಾಗಿದ್ದಾರೆ. ಅವರ ಒಳ ಮರ್ಮ ಕ್ಷೇತ್ರದ ಜನತೆಗೆ ಗೊತ್ತಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ಜನತೆ ಹಾಲಿ ಮತ್ತು ಮಾಜಿ ಶಾಸಕರ ನಡೆಗೆ ಜನರು ಬೇಸತ್ತು ಹೋಗಿದ್ದಾರೆ ತಾಲೂಕ ಕೇಂದ್ರ ಅಫಜಲಪುರ ಪಟ್ಟಣ ಪುರಸಭೆ ಆಗಿ ಮೇಲ್ದರ್ಜೆಗೆ ಎರಿದರು ಹೇಳಿಕೊಳ್ಳುವಷ್ಟು ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಅಷ್ಟೇ ಅಲ್ಲದೇ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಇನ್ನು ಮೂಲಭೂತ ಸೌಲಭ್ಯಗಳು ವಂಚಿತ ಗ್ರಾಮಗಳಾಗಿವೆ. ಜನರು ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಮಹಿಳೆಯರಿಗೆ ಶೌಚಾಲಯಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗೆ ಅನೇಕ ಸಮಸ್ಯೆಗಳಿಂದ ಕ್ಷೇತ್ರ ನಲುಗುತ್ತಿದೆ. ಹೀಗಾಗಿ ಬರುವ ದಿನಗಳಲ್ಲಿ ಜನರು ಹೊಸ ನಾಯಕನ ಬರುವಿಕೆಗಾಗಿ ಕಾದು ಕುಳಿತ್ತಿದ್ದಾರೆ ಎಂದರು.
ಹಿಜಾಬ್ ಹಾಗೂ ಕೇಸರಿ ಶಾಲಿಗೆ ನಾವೆಲ್ಲರೂ ಗೌರವಿಸಬೇಕು
ಧರ್ಮ ಅವರವರಿಗೆ ಶ್ರೇಷ್ಠ ಯಾವುದೇ ಧರ್ಮಕ್ಕೆ ಕೀಳಾಗಿ ಕಾಣಬಾರದು ನಾವೆಲ್ಲರು ಭಾರತೀಯರಾಗಿ ಪ್ರೀತಿ ವಿಶ್ವಾದಿಂದ ಬಾಳೋಣ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವ ರಾಜಕೀಯಕ್ಕಾಗಿ ಸಮಾಜದಲ್ಲಿ ಕೋಮು ಗಲುಬೆ ಸೃಷ್ಟಿಸುತ್ತವೆ ಯಾರು ಕಿವಿಗೊಡಬಾರದು ಎಂದರು.
ಕಲ್ಬುರ್ಗಿ ಇಂದ ಹೊಸೊರು ರಾಷ್ಟ್ರೀಯ ಹೆದ್ದಾರಿ ಹಾಳಾಗಿದೆ. ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚಿಗೆ ಸಾವು ನೋವುಗಳು ಕೂಡ ಆಗಿವೆ. ಇಷ್ಟೇಲ್ಲ ಸಮಸ್ಯೆ ಇದೆ ರಾಜ್ಯದಲ್ಲಿ ತಮ್ಮದೇಯಾದ ಬಿಜೆಪಿ ಸರಕಾರ ಇದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರವರು ತಮ್ಮ ಪಕ್ಷದ ಮೇಲೆ ಒತ್ತಡ ಹಾಕಿ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಮುಂದಾಗುತ್ತಿಲ್ಲ.
ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಕಚೇರಿ ಮುಂದೆ ತಾಲೂಕಿನ ಜನರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆಡಿಎಸ್ ತಾಲೂಕ ಘಟಕ ಅಧ್ಯಕ್ಷ ಜಮೀಲ ಗೌಂಡಿ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಸಿಂಗೆ, ಶಂಕರಗೌಡ ಪಾಟೀಲ, ಸಂತೋಷಿ ಕಾಳೆ, ಅಮರಸಿಂಗ ರಜಪೂತ, ಅಮೋಲ ಮೊರೆ, ಶ್ರೀಕಾಂತ ದಿವಾಣಜಿ, ಶೆಟ್ಟಪ್ಪ ಬಿದನೂರ ನಿಂಗಣ್ಣ ಹೂಗಾರ, ಶರಣಪ್ಪ ಕಲಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.