ಕೊಲ್ಹಾರ |ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತಳವಾರ ಸಮಾಜಕ್ಕೆ ವರದಾನ..! ಹೇಗೆ ಗೊತ್ತಾ..?
ವಿಜಯಪುರ : ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಸಮುದಾಯ, ಸಮಾಜದ ಜನರು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಅನುಬಂಧ ಸಿ ಕ್ರಮ ಸಂಖ್ಯೆ 38 ರಲ್ಲಿರುವ ಕೊಡ್ ಸಂಖ್ಯೆ 13 (ತಳವಾರ ) ಎಂದು ಬರೆಯಬೇಕು. ನಮ್ಮ ವರ್ಗಕ್ಕೆ ರಾಷ್ಟ್ರಪತಿ ಅಂಕಿತವಾಗಿರುವುದರಿಂದ ಉಪಜಾತಿ ಅನ್ವಯವಾಗುವುದಿಲ್ಲ. ಆದರೆ ಇತರೆ ಎಂದಲ್ಲಿ ನಾಯ್ಕಡ/ನಾಯಕ ಎಂಬ ಪದಗಳು ಬರೆಯಬಹುದು ಸಮಾಜದ ಮುಖಂಡರು ಚರ್ಚಿಸಿ ನಿರ್ಧರಿಸಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ತಳವಾರ ಸಮಾಜ ಮುಖಂಡರು ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ ನಡೆಸುತ್ತೀರುವ ಸಮೀಕ್ಷೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕರೆದು ಚರ್ಚಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಆನಂದ ಗೊರಗುಂಡಗಿ ಮಾತನಾಡಿದ ಅವರು, ನಮ್ಮ ಸಮಾಜ ಸ್ವತಂತ್ರ ಪೂರ್ವ ಮತ್ತು ನಂತರ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದೆ ಎಂಬುದು ತಮ್ಮಲ್ಲರಿಗೂ ಗೊತ್ತಿರುವ ವಿಷಯ. ಇವತ್ತಿಗೂ ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಕ್ಷೇತ್ರ ಅಥವಾ ರಂಗದಲ್ಲಾಗಲಿ ದೊರೆತ ಸಹಾಯ ಸಹಕಾರದ ಬಗ್ಗೆ ಗೊತ್ತಿದೆ. ಇಂದು ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಎಲ್ಲಾ ಸಮುದಾಯಗಳು ಬದಲಾವಣೆ ಮತ್ತು ಪರಿವರ್ತನೆ ಕಾಣುತ್ತಿದ್ದೆವೆ. ಆದರೆ ನಮ್ಮ ಸಮಾಜದ ಬೆಳವಣಿಗೆ ಅಯ್ಯೊ..! ಎನ್ನುವ ಹಾಗೆ ಅತ್ಯಂತ ಚಿಂತಾಜನಕವಾಗಿರುವ ಪರಿಸ್ಥಿತಿ ನಾವು ನೀವು ಅನುಭವಿಸುತ್ತಿದ್ದೆ. ನಮ್ಮ ಸಮಾಜಕ್ಕೆ ಇತಿಹಾಸವಿದೆ. ಇತಿಹಾಸ ಗೊತ್ತು ಇರದ ವ್ಯಕ್ತಿ ಇತಿಹಾಸ ಸೃಷ್ಟಿಸಲಾರ. ಅದಕ್ಕಾಗಿ ನಮ್ಮ ಸಮಾಜದ ಇತಿಹಾಸವನ್ನು ಒಂದು ಬಾರಿ ಅವಲೋಕನ ಮಾಡಿಕೊಳ್ಳಬೇಕು. 14 ಮತ್ತು 15 ನೇ ಶತಮಾನದಲ್ಲಿ ನಮ್ಮ ಸಮಾಜದ ಹಿರಿಯರು ಕೋಟೆ ಕೊತ್ತಲು, ಗ್ರಾಮ ರಕ್ಷಣೆಗಾಗಿ ಪ್ರಾಣವನ್ನು ತ್ಯಾಗ ಮಾಡಿ ಈ ದೇಶಕ್ಕಾಗಿ ಆಯಸ್ಸು ಮುಡಿಪಾಗಿಟ್ಟಿದ್ದಾರೆ. ಆದರೆ ನಮ್ಮ ಸಮಾಜದ ದುರ್ದೈವ. ಇಲ್ಲಿಯವರೆಗೆ ಪ್ರಪಂಚದ ಬೆಳದಂತೆ,ಹಲವಾರು ಸಮಾಜಗಳು ಹಾಗೂ ಮಾನವ ಕುಲದಂತೆ ನಮ್ಮ ಸಮಾಜವು ಬೆಳವಣಿಗೆ ಕಾಣಬೇಕಾಗಿತ್ತು. ನಮ್ಮ ಸಮಾಜದಲ್ಲಿ ಅಕ್ಷರಶಃ ಅಕ್ಷರಸ್ಥರ ಕೊರತೆ, ನಾಯಕರ ಕೊರತೆ, ಸಮಾಜದಲ್ಲಿ ಮೂಢನಂಬಿಕೆ ಕಟ್ಟು ಕಥೆಗಳು ತುಂಬಿಕೊಂಡು ಬದುಕು ನಡೆಸಿದ್ದಕ್ಕೆ ನಮ್ಮ ಸಮಾಜಕ್ಕೆ ಇದೊಂದು ದುರಂತ ಸಂಗತಿಯಾಗಿದೆ.
ಎಲ್ಲಿಯವರೆಗೆ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಕಾಣುವುದಿಲ್ಲವೋ..! ಅವಕಾಶ ದೊರೆಯುವುದಿಲ್ಲವೋ..! ಅಲ್ಲಿಯವರೆಗೆ ನಮ್ಮ ಸಮಾಜ ಕತ್ತಲೆ ಕೊಣೆಯಲ್ಲಿಯೆ ಇರುತ್ತವೆ.
ಆದರೆ ಈ ಸದ್ಯ ರಾಜ್ಯಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾಜಕ್ಕೆ ನಮ್ಮ ಸಮಾಜಕ್ಕೆ ವರದಾನವಾಗಿಲಿದೆ. ಈ ಹಿಂದೆ ಹಲವು ಸಮೀಕ್ಷೆಗಳು ನಡೆದರೂ ಸಹ ಜ್ಞಾನದ ಕೊರತೆಯಿಂದ ಬೇರೆಬೇರೆ ಜಿಲ್ಲೆಯವರು ಮಾತು ಆಲಿಸಿ ತಪ್ಪು ತಪ್ಪಾಗಿ ಸಮಾಜದ ಬಗ್ಗೆ ಸರಕಾರಕ್ಕೆ ಮಾಹಿತಿ ಒದಗಿಸದಂತಾಗಿದೆ. ಆದರೆ ಈ ಬಾರಿ ಆ ರೀತಿಯಲ್ಲಿ ನಡೆಯಬಾದೆಂದೆ ಕೊಲ್ಹಾರ ಪಟ್ಟಣದಲ್ಲಿ ತಳವಾರ ಸಮಾಜದ ಮುಖಂಡರು ಸಭೆ ಆಯೋಜಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಶೋಷಿತ ಅನ್ಯಾಯಕ್ಕೆ ಒಳಪಟ್ಟ, ತುಳಿತಕ್ಕೆ ಒಳಪಟ್ಟ ಬುಡಕಟ್ಟು ಸಮುದಾಯ ಎಂದು ಗುರುತಿಸಿ 2020 ರಲ್ಲಿ ತಳವಾರ ಸಮಾಜವನ್ನು 1935 ರ ಬ್ರಿಟಿಷ್ ರಾಣಿ ಎಲಿಜಬೆತ್ ರ ನಾಯ್ಕಡ/ನಾಯಕ ಗೆಜಟ್ ಪಟ್ಟಿಯಂತೆ ಇಂದು ಕೇಂದ್ರ ಸರಕಾರ ಕ್ರಮ ಸಂಖ್ಯೆ 38 ರ ಪಟ್ಟಿಗೆ ಸೆರ್ಪಡೆಗೊಳಿಸಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸಿದೆ. ಈ ಸದ್ಯ ನಡೆಯುತ್ತೀರುವ ಸಮೀಕ್ಷೆಯಲ್ಲಿ ತಳವಾರ ಸಮಾಜದ ಜನಾಂಗದವರು ಶಾಲೆಯಲ್ಲಿ ಬರೆದಿರುವ ಜಾತಿಗಳ ಬಗ್ಗೆ ಮಹತ್ವ ನೀಡದೆ, ಸಾರ್ವಜನಿಕ ಬದುಕಿನಲ್ಲಿ ನಮ್ಮ ನ್ನು ಹೇಗೆ ತಳವಾರ ಎಂದು ಕರೆಯುತ್ತಾರೆಯೋ..! ಹಾಗೆ ನಾವು ಮುಖ್ಯ ಜಾತಿ ತಳವಾರ ಎಂದು ನಮೂದಿಸಿಬೇಕು. ಉಪ ಜಾತಿ ಅನ್ವಯವಾಗುವುದಿಲ್ಲ. ಇತರೆ ಅಂತಹ ಸಂದರ್ಭದಲ್ಲಿ ನಾಯ್ಕಡ/ನಾಯಕ ಎಂದು ಬರೆಯುವುದು ಅತ್ಯಂತ ಸೂಕ್ತ.
ಸರಕಾರದಲ್ಲಿ ತಳವಾರ ಸಮಾಜದ ಬಗ್ಗೆ ಸಂಪೂರ್ಣ ಮಾಹಿತಿ ಕೊರತೆ ಮತ್ತು ಗೊಂದಲದ ಗೂಡಾಗಿದ್ದರಿಂದ
ಈ ಸಮೀಕ್ಷೆಯ ಮೂಲಕ ರಾಜ್ಯ ಸರಕಾರಕ್ಕೆ ಒಳ್ಳೆಯ ವರದಿ ಕೊಡಲು ಸುವರ್ಣ ಅವಕಾಶ. ಇದು ಮುಂದಿನ 50 ವರ್ಷದ ದೂರದೃಷ್ಟಿಯಿಂದಲೂ ಸಮಾಜಕ್ಕೆ ಗ್ರಂಥವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರ್ ಜಮಾದಾರ, ಸುರೇಶ ಡೊಂಗ್ರೊಜ್, ಸಂಜೀವ ತಳವಾರ,ಬಸಪ್ಪ ಕೋಠಾರಿ, ರಾಜಶೇಖರ ದಳವಾಯಿ, ರಾಮಣ್ಣ ಪಡಸಲಗಿ, ಸದಾಶಿವ ಬಳೂತಿ, ವಿರೂಪಾಕ್ಷ ಕೂಲಕಾರ, ಮುದಕಪ್ಪ ಶಿಂದೆ, ಪರಸಪ್ಪ ಗಡ್ಡಿ, ಸಂಗಪ್ಪ ಕೊಲ್ಹಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.