ಲಿಂಗಸೂಗೂರು: ತಾಲೂಕಿನ ಯಳಗುಂದಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಶಾಸಕರು ಲಿಂಗಸುಗೂರು ನಗರದಲ್ಲಿ ಇದ್ದರು ಕೂಡ ಭಾಗವಹಿಸದೆ ಸಾರ್ವಜನಿಕ ಸಮಸ್ಯೆಗಳು ಬಗೆಹರಿಸಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಲಿಂಗಸುಗೂರು ತಾಲೂಕಿನ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಹೊರಟಿರುವ ಅಧಿಕಾರಿಗಳ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚಿಗೆ ವಾಗಿದೆ ಆದರೆ ಇಲ್ಲಿನ ಶಾಸಕರು ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಕಾರ್ಯಕ್ರಮದಲ್ಲಿ ನಿರತವಾಗಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಶಾಸಕರೆ? ಈ ರೀತಿ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಸರ್ಕಾರದ ಕೇಲಸಗಳು ಅಂದರೆ ಅಸಡ್ಡೆ ತೋರುತ್ತದೆ ಎಂಬುದು ಇವರಿಗೆ ಕಾಣಿಸದಂತೆ ಆಗುತ್ತದೆ ಎಂದರೆ ತಪ್ಪಾಗಲಾರದು.
ಜನಸಾಮಾನ್ಯರ ಕೇಲಸ ಮುಖ್ಯವೊ ಅಥವಾ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮುಖ್ಯವೊ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಸ್ಥಳಿಯವಾಗಿದ್ದರು ಸರ್ಕಾರದ ನಿಯಮ ಪ್ರಕಾರ ಜಿಲ್ಲಾ ಆಡಳಿತ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಇರುವುದು ಖಂಡನಿಯ ವಿಷಯವಾಗಿದೆ ಎಂದು ಸ್ಥಳೀಯರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಲಿಂಗಸುಗೂರ ತಾಲ್ಲೂಕಿನ ಯಾಳಗುಂದಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮಾದಲೇ ಕಾರ್ಯಕ್ರಮಕ್ಕೆ ತಾಲೂಕು ಆಡಳಿತದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು ಕೊನೆಯಲ್ಲಿ ಜಿಲ್ಲಾಧಿಕಾರಿಗಳು ಬೇರೆ ತಾಲ್ಲೂಕಿನ ಗ್ರಾಮವನ್ನು ಆಯ್ಕೆ ಮಾಡಿದರು ಲಿಂಗಸುಗೂರ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.ಕಾರ್ಯಕ್ರಮದಂತೆ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಸಭೆಗಳನ್ನ ನಡೆಸಿ,ಅಹವಾಲುಗಳನ್ನ ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯಕ್ರಮ ಇದು.ಆದರೆ ಇಂದು ಲಿಂಗಸುಗೂರ ತಾಲೂಕಿನ ಯಳ ಗುಂದಿ ಗ್ರಾಮ ಕ್ಕೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಗೈರಾಗಿದ್ದರು.ಕೇವಲ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಲಿಂಗಸುಗೂ ರ ತಾಲೂಕಿನ ತಹಶೀಲ್ದಾರ್ ಬಲರಾಮ ಕಟ್ಟಿಮನಿ ನೇತೃತ್ವದಲ್ಲಿ ತಾಲೂಕು ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು. ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಗ್ರಾಮಸ್ಥರಿಗೆ . ಶಾಸಕರು ಇಲ್ಲದೆ ನಮ್ಮ ಸಮಸ್ಯೆಗಳು ಯಾರ ಬಳಿ ಹೇಳಬೇಕು ಎಂಬುದು ರೈತರ ಅಳಲು ತೋಡಿಕೊಂಡರು .ನಮ್ಮ ಗ್ರಾ?ಮದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ .
ಪ್ರವಾಹ ಬಂದಾಗ ಮಾತ್ರ ಶಾಸಕರಿಗೆ ನಡುಗಡ್ಡೆ ಜನರ ನೆನಪು ?
ನಡುಗಡ್ಡೆ ಕುಗ್ರಾಮದಲ್ಲಿ ಪ್ರವಾಹ ಬಂದಾಗ ಮಾತ್ರ ಶಾಸಕರು ಬಂದು ಹೊಗಿದ್ದು ಬಿಟ್ಟರೆ ಇಂದಿಗೂ ಸಹ ನಮ್ಮ ಗ್ರಾಮಕ್ಕೆ ಭೇಟಿ ನೀಡದೆ ದಲಿತ ಕುಟುಂಬದ ಜೋತೆ ಚಲ್ಲಾಟವಾಡುತ್ತಿದ್ದಾರೆ ಎಂದು ಪ್ರವಾಹ ಸಂತ್ರಸ್ತರ ಆರೋಪಿಸಿದ್ದಾರೆ ಇಂತಹ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಶಾಸಕರು ತಮ್ಮ ತಮ್ಮ ತಾಲ್ಲೂಕಿನ ಜಿಲ್ಲಾ ಆಡಳಿತ ತಾಲೂಕು ಆಡಳಿತ ಹಮ್ಮಿಕೊಳ್ಳಲಾದ ಜಿಲ್ಲಾಡಳಿತ ನಡೆ ಹಳ್ಳಿಯ ಕಡೆ ಘೋಷವಾಕ್ಯ ದೊಂದಿಗೆ ಅಧಿಕಾರಿಗಳ ಜೋತೆ ಕೈಜೋಡಿಸಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಹೊರಟಿರುವ ಮಸ್ಕಿ ಶಾಸಕರು ಮತ್ತು ದೇವದುರ್ಗದ ಶಾಸಕರು ಜನಪರವಾಗಿ ಕೇಲಸ ಮಾಡುವ ಮುಖಾಂತರ ಜನಮೆಚ್ಚುಗೆ ಪಾತ್ರರಾಗಿದ್ದಾರೆ .
ಆದರೆ ನಮ ಕ್ಷೇತ್ರದ ಶಾಸಕರು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಕಾರ್ಯಕ್ರಮ ಮುಖ್ಯವಾಗಿದೆ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡದ ಶಾಸಕರಿಗೆ ಗ್ರಾಮೀಣ ದಾಟಿಯಲ್ಲಿ ಗುಸು ಗುಸು ಮಾತನಾಡಿದರು.
ಪರಿಹಾರ ತಾಲೂಕಿನಾದ್ಯಂತ ಅಕ್ರಮ ಮರಳು ಹಾಗೂ ಮರಾಮ ಸಾಗಾಟ ನೆಡೆದಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿಗಳ ಗೈರನ್ನ ಹೈಲೈಟ್ ಮಾಡಿದರು.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಗೈರಾಗಿದ್ದು ವಿಪರ್ಯಾಸ. ಲಿಂಗಸುಗೂರ ಶಾಸಕರು ಗೈರಾಗಿದ್ದು ಅವರು ತಾಲ್ಲೂಕಿನ ಜನರ ಸಮಸ್ಯೆಗಳನ್ನು ಕೇಳಿ ಅಲ್ಲಿಯೇ ಪರಿಹಾರ ಕಂಡುಕೊಳ್ಳಲು ಒಂದು ಉತ್ತಮವಾದ ಕಾರ್ಯಕ್ರಮವಿದ್ದರು ಶಾಸಕರ ನಿರ್ಲಕ್ಷ್ಯ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಸಾಕಷ್ಟು ನಿರತಯಾಗಿದ್ದು ಅವರ ಜನಪರ ಕಾಳಜಿ ಇಲ್ಲದ ಬಗ್ಗೆ ಅವರ ಮನಸ್ಥಿತಿ ಅರಿವುವಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ವಿಷಯ ಗ್ರಾಸವಾಗಿದೆ.