ರಾಯಚೂರು: ಮಡ್ಡಿಪೇಟೆಯ ಶ್ರೀ ಶಂಖುಚಕ್ರ ಮಾರುತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್. ಎಸ್ ಬೋಸರಾಜ್ ರವರ ಅನುದಾನದಲ್ಲಿ ೫೦೦೦೦೦/-ವೆಚ್ಛದ ಸಮುದಾಯ ಭವನ ನಿರ್ಮಿಸಿ ಇಂದು ಅದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್. ಎಸ್.ಭೋಸರಾಜ್ ಅವರು ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ,ಕಾಂಗ್ರೇಸ್ ಮುಖಂಡರಾದ ರುದ್ರಪ್ಪ ಅಂಗಡಿ,ಸವಿತಾ ಸಮಾಜದ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇಟಗಿ,ಜಿಲ್ಲಾಧ್ಯಕ್ಷರು ವಿಜಯಭಾಸ್ಕರ್ ಇಟಗಿ, ಕಾರ್ಯದರ್ಶಿ ವೆಂಕಟೇಶ ವಲ್ಲೂರು,ತಾಲೂಕ ಅಧ್ಯಕ್ಷರು ಭೀಮೇಶ ಗುಂಜಳ್ಳಿ ನಗರ ಅಧ್ಯಕ್ಷ ವಿ.ಗೋವಿಂದ, ಎಸ್ ಅನಿಲ್ ಕುಮಾರ್, ವಿ.ಗೋಪಾಲ್, ಉರಕುಂದ ವಡವಾಟಿ, ಅಂಜಿನಯ್ಯ ಇಡಪನೂರು, ನರಸಿಂಹ ಕೊಲ್ಪೂರು, ಅಶೋಕ ವಂಕಸಂಭ್ರ ಸಿ.ನರೇಂದ್ರ, ಡಿ.ಲಕ್ಮಿಕಾಂತ, ಡಿ.ವೀರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.