ಲಿಂಗಸೂಗೂರು: ಪಟ್ಟಣದಲ್ಲಿ ಸಚಿನ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸರಕಾರದ M.S.M.E ಸಂಸ್ಥೆಯ ಸಹಯೋಗದೊಂದಿಗೆ ಮಹಿಳಾ ಉದ್ಯಮ ಸ್ಥಾಪನೆಯ ಕುರಿತು ಒಂದು ದಿನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ M.S.M.E ಸಂಸ್ಥೆಯ ಸಹಾಯಕ ಕಾರ್ಯದರ್ಶಿಗಳಾದ B.S.ಜವಳಗಿ ಅವರು ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಹಾಗೂ ಅವರ ಸಾಧನೆಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕ ಕೈಗಾರಿಕ ಅಧಿಕಾರಿಗಳಾದ ಶ್ರೀಮತಿ ರತ್ನ ಅವರು ಕೈಗಾರಿಕಾ ಕ್ಷೇತಕ್ಕೆ ಮಹಿಳೆಯರ ಕೊಡುಗೆ ಮತ್ತು ಈ ಕ್ಷೇತ್ರದಲ್ಲಿ ಸರಕಾರವು ಮಹಿಳೆಯರಿಗೆ ನಿಡುತ್ತಿರುವ ಸೌಲಭ್ಯಗಳ ಕುರಿತು ವಿವರಿಸಿದರು.
ಉಳಿದಂತೆ ಈ ಸಮಾರಂಭದಲ್ಲಿ ಅತಿಥಿಗಳಾದ ಸಚಿನ್ ಸಂಸ್ಥೆಯ ಅಧ್ಯಕ್ಷರಾದ ಈರಮ್ಮ ನಡೆಹಾಳಮಠ, ಸತೀಶ್ ಹೀರೆಮಠ ಸಚೀನ್ ಸಂಸ್ಥೆಯ ಕಾರ್ಯದರ್ಶಿಗಳು, ಶ್ರೀಮತಿ ಶೋಭಾ ಕಾಟವ ಆಶ್ರಯ ಸಮಿತಿ ನಾಮ ನಿರ್ದೇಶಿತ ಸದಸ್ಯರು ಪುರಸಭೆ ಲಿಂಗಸಗೂರು, ಜ್ಯೋತಿ ಸುಂಕದ, ರಾಯಚೂರು ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ನಾಮ ನಿರ್ದೇಶಿತ ಸದಸ್ಯರು,ಈ ಕಾರ್ಯಕ್ರಮಕ್ಕೆ ಸ್ಮೀತಾ ಅಂಗಡಿ, ಶಿವಮ್ಮ, ನಾಗರತ್ನ ಇನ್ನಿತರ ಮಹಿಳೆಯರು ಭಾಗವಹಿಸಿದ್ದರು.