ಯಾದಗಿರಿ: ವಡಗೇರಾ ತಾಲ್ಲೂಕಿನ ಕುರಿಹಾಳ ಗ್ರಾಮದಲ್ಲಿ ನೂತನ ಅಂಬಾ ಮಹೇಶ್ವರಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ನಡೆಯಿತು. ಎರಡ್ಮೂರು ದಿನಗಳಿಂದ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳು ನಡೆದು, ಇಂದು ಬೆಳಿಗ್ಗೆ ಗಂಗಾಸ್ನಾನವು ಜರುಗಿತು.
ನಂತರದಲ್ಲಿ ನವಗ್ರಹ ಪೂಜೆ ಜರುಗಿ ದೇವಸ್ಥಾನ ಉದ್ಘಾಟನೆ ಹಾಗೂ ನೂತನವಾದ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಡೊಳ್ಳು ಕುಣಿತದೊಂದಿಗೆ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.