ಮಕ್ಕಳ ಸಾಹಿತ್ಯವು ಮಕ್ಕಳಲ್ಲಿರುವ ಪ್ರತಿಭೆಯನ್ನು ಬೆಳೆಸುತ್ತದೆ
ಇಂಡಿ : ಮಕ್ಕಳ ಸಾಹಿತ್ಯವು ಮಕ್ಕಳಲ್ಲಿರುವ ಪ್ರತಿಭೆಯನ್ನು ಕೌಶಲ್ಯವನ್ನು ಗುರುತಿಸುವಂತಹ ಕೆಲಸ ಹಾಗೂ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲು ವೇದಿಕೆಯು ಕೆಲಸ ಮಾಡುತ್ತದೆ ಎಂದು ತಾಲೂಕಾ ಮಕ್ಕಳ ಸಾಹಿತ್ಯ ಸಂಗಮ ವೇದಿಕೆಯ ಅಧ್ಯಕ್ಷ, ಉಪನ್ಯಾಸಜ ಸದಾನಂದ ಎಸ್ ಈರನಕೇರಿ ಹೇಳಿದರು.
ಶ್ರೀಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಶ್ರೀಮತಿ ಶಾಲಿನಿ ಮಾಣಿಕ್ ಚಂದ್ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕಾ ಮಕ್ಕಳ ಸಾಹಿತ್ಯ ಸಂಗಮ ವೇದಿಕೆ ಸಹಯೋಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮಕ್ಕಳ ಸಾಹಿತ್ಯ ಬೆಳೆದು ಬಂದ ಬಗ್ಗೆ ವಿವರಿಸುತ್ತಾ , ವಚನ ಕಂಠ ಪಾಠ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿಯನ್ನು ದ್ವಿಗುಣಗೊಳಿಸುವ ಕೆಲಸವನ್ನು ಹಾಗೂ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸುವ ಕೆಲಸ ಮಕ್ಕಳ ಸಾಹಿತ್ಯ ವೇದಿಕೆಯು ಮಾಡುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಸ್ ಬಿ ಹಡಪದ್ ಉಪನ್ಯಾಸಕರು ಮಾತನಾಡುತ್ತಾ, ಸಾಹಿತ್ಯದಲ್ಲಿಯೇ ವಿಭಿನ್ನವಾದ ಸಾಹಿತ್ಯ ವಚನ ಸಾಹಿತ್ಯ. ಬಸವಾದಿ ಶರಣರ ಸಾಹಿತ್ಯವನ್ನು ನಾವೆಲ್ಲರೂ ಓದಿಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳು ನಮಗೆ ದಾರಿದೀಪ ವಚನ ಸಾಹಿತ್ಯ ವಿಜ್ಞಾನ ಮತ್ತು ವೈಚಾರಿಕತೆಯನ್ನು ಒಳಗೊಂಡ ಸಾಹಿತ್ಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಶರಣರು ತಮ್ಮ ಅನುಭವಕ್ಕೆ ಬಂದ ವಿಚಾರಗಳನ್ನು ತಮ್ಮ ವಚನಗಳ ಮೂಲಕ ಬರೆದರು ಅದುವೇ ವಚನ ಸಾಹಿತ್ಯವಾಯಿತು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ವಿಜಯ ಕುಮಾರ್ ರಾಠೋಡ್ ಮಾತನಾಡುತ್ತಾ 12ನೇ ಶತಮಾನದ ಶರಣೆ ,ಶರಣರು ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ತಮ್ಮ ವಚನಗಳು ಬರೆಯುವುದರ ಮೂಲಕ ಮಾಡಿದರು. ಆಗಿನ ಕಾಲದ ಶರಣರು ಕಾಯಕಕ್ಕೆ ಮಹತ್ವವನ್ನು ಕೊಟ್ಟಿದ್ದರು ನೀವೆಲ್ಲ ವಿದ್ಯಾರ್ಥಿಗಳು ಓದುವ ಕಾಯಕವನ್ನು ಮಾಡಿಕೊಂಡು ಕಾಲೇಜಿಗೆ ಕೀರ್ತಿಯನ್ನು ತರಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಕುಮಾರಿ ಐಶ್ವರ್ಯ ಹಿರೇಕುರುಬರ್ ದ್ವಿತೀಯ ಸ್ಥಾನ ಪ್ರಿಯಾ ಚೌಹಾನ್ ಪಲ್ಲವಿ ಪರೀಟ್ ವಿಜಯಲಕ್ಷ್ಮಿ ಬಡಿಗೇರ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್ ಎಸ್ ಬಿರಾದಾರ್. ವಹಿಸಿದ್ದರು. ಎ ಬಿ ಪಾಟೀಲ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.