ಚಿನ್ನಾಭರಣ ಕದ್ದು ಕಳ್ಳರು ಎಸ್ಕೇಪ್
ಆರು ಗ್ರಾಮಗಳನ್ನು ಟಾರ್ಗೆಟ್ ಮಾಡಿದ ಚೋರರು
ಲಿಂಗಸಗೂರ್: ಮೊಹರಂ ಹಬ್ಬದ ಹಿನ್ನಲೆಯಲ್ಲಿ ಬೇರೆ ಬೇರೆ ಭಾಗದ ಆಲಂಗಳ ದರ್ಶನಕ್ಕೆ ತೆರಳಿದ ಕುಟುಂಬಸ್ಥರಿಗೆ ಬಿಗ್ ಶಾಕ್ ಒಂದು ಎದುರಾಗಿತ್ತು. ತಮ್ಮ ಮನೆ ಕಳ್ಳತನವಾಗಿರುವ ಸುದ್ದಿ ತಿಳಿದ ಮಾಲೀಕರಿಗೆ ಒಂದು ಕ್ಷಣ ಎದೆ ಜಲ್ ಎಂದಿತ್ತು.
ಹೌದು ಮೊಹರಂ ಹಬ್ಬವನ್ನೇ ನೆಪ ಮಾಡಿಕೊಂಡ ಕಳ್ಳರು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ 6 (ಆರು) ಗ್ರಾಮಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಬಂಗಾರ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ತಾಲೂಕಿನ ಈಚಾನಾಳ ತಾಂಡಾದ ಶಾಂತಮ್ಮ ಜಾದವ್ ಅವರ ಮನೆಯಲ್ಲಿ
4,89,800 ರೂ. ಬೆಲೆ ಬಾಳುವ ಚಿನ್ನಭರಣ, ಕರಡಕಲ್ ಗ್ರಾಮದ ರುದ್ರಯ್ಯ ಸ್ವಾಮಿ ಬಜಾರಾಮಠ, ಗುಂಡಯ್ಯ ಸೊಪ್ಪಿಮಠ ಅವರ ಮನೆಯಲ್ಲಿ 6,41,000 ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಕಳ್ಳತನವಾಗಿವೆ. ಅಲ್ಲದೆ ಆನೆಹೊಸೂರು, ಚಿತ್ತಾಪುರ ಗ್ರಾಮಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ ಎಸ್ಕೇಪ್ ಆಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಲಿಂಗಸಗೂರು ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.