ಯುವಕರು ದೇಶ ಆಸ್ತಿ, ಸದ್ದಿಲ್ಲದೆ ಹಾಳಾಗುತ್ತೀರುವುದು ಅತ್ಯಂತ ಕಳವಳಕಾರಿ
ಇಂಡಿ : ಮಾದಕ ವಸ್ತುಗಳ ಸೇವನೆ ದುಶ್ಚಟ, ನರಕಕ್ಕೆ ದಾರಿ ತೋರಿಸುತ್ತದೆ. ಅದಲ್ಲದೇ ಯುವಕರು ದೇಶ ಆಸ್ತಿ, ಸಂಪತ್ತು ಸದ್ದಿಲ್ಲದೆ ಹಾಳಾಗುತ್ತೀರುವುದು ಅತ್ಯಂತ ಕಳವಳಕಾರಿ ಎಂದು ಬಿ ಎಚ್ ಇ ಓ ವೈ ಎಂ ಪೂಜಾರಿ ಮಾತನಾಡಿದರು.
ತಾಲೂಕಿನ ಲಚ್ಯಾಣ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಮಾದಕ ದ್ರವ್ಯ ಹಾವಳಿ ನಿಯಂತ್ರಣ ಅರಿವು ಕಾರ್ಯಕ್ರಮ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸದ್ಯ ಮಗು ಅಂಗಳದಲ್ಲಿ ಆಡುತ್ತ ಅಂಗನವಾಡಿಗೆ ಹೋಗಿ ಮನೆಗೆ ಬರುತ್ತದೆ. ಬೆಳವಣಿಗೆ ಆದಂತೆ ಪ್ರಾಥಮಿಕ ಶಾಲೆಗೆ ಹೋಗುವ ಮಗು ಕಲಿಕೆಯ ಹಂತದಲ್ಲಿ ಅನುಕರಣೆಯಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇನ್ನೂ ಮದುವೆ ಸಮಾರಂಭ, ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳವಾಗ ಸಮೂಹದ ಒತ್ತಡ ಮಧ್ಯದಲ್ಲಿ 10 ರಿಂದ 19 ವರ್ಷದ ಮಕ್ಕಳು
ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ.
ಅತ್ತ ಬಾಲ್ಯನು ಅಲ್ಲ ಇತ್ತ ಯೌವ್ವನನ್ನು ಅಲ್ಲ ಪ್ರೌಢಾವಸ್ಥೆಯಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಸದ್ದಿಲ್ಲದೆ ಹಾಳಾಗುತ್ತಿರುವದು ಅತ್ಯಂತ ನೋವಿನ ಸಂಗತಿ. ಇದು ಗ್ರಾಮ, ರಾಜ್ಯ, ದೇಶಕ್ಕೆ ಗಂಡಾಂತರ ಸಮಸ್ಯೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ 10 ರಿಂದ 15 ವರ್ಷದೊಳಗಿನ ಮಕ್ಕಳು ಶೇಕಡ 15ರಷ್ಟು ಮಕ್ಕಳು ಪ್ರತಿ ಗ್ರಾಮಗಳಲ್ಲಿ ತಂಬಾಕು ಮೂಲ ಉತ್ಪನ್ನಗಳ ತಂಬಾಕು ಗುಟುಕ ಪಾನ್. ಬೀಡಿ ಸಿಗರೇಟ್ ಧೂಮಪಾನ ಸೇವನೆ ನಿರಂತರ ಡಿಜಿಟಲ್ ಮೊಬೈಲ ಬಳಕೆ ಮೂಲಕ ಕೆಟ್ಟ ವ್ಯವಸ್ಥೆಯಲ್ಲಿ ಮುಳುಗುತ್ತಿದ್ದಾರೆ. ಇತ್ತ ನಗರ ಪಟ್ಟಣಗಳಲ್ಲಿ ಯುವಕರು ಪ್ರತಿಷ್ಟಿಗಾಗಿ ಡ್ರಗ್ಸು ಇಂಜಕ್ಷನ್ ಅಫಿಮು, ಕೋಕಾ, ಗಾಂಜಾ ಸೇವನೆಯಿಂದ ಕ್ಯಾನ್ಸರ್ ಪಡಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕುಟುಂಬ ಮತ್ತು ದೇಶದ ಆರ್ಥಿಕ ವ್ಯವಸ್ಥೆ ಹಾಳಾಗುತ್ತಿದೆ.
ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಮೂಲಕ ಬದುಕು ರೂಪಿಸುವುದು ಅನಿವಾರ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ವಸತಿ ನಿಲಯಗಳ ಹತ್ತಿರದಲ್ಲಿರುವ ತಂಬಾಕು ಮೂಲ ಉತ್ಪನ್ನಗಳು ಅಂಗಡಿಗಳು, ಮಧ್ಯೆ ಮಾರಾಟ ಅಂಗಡಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಮಕ್ಕಳು 4ನೇ ತರಗತಿಯಿಂದ ಪದವಿ ಪೂರ್ವ ಪಿಯುಸಿ ತನಕ ಮಕ್ಕಳ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಹಾಗಾಗಿ ಈ ಬಗ್ಗೆ ಕುಟುಂಬ, ಸಮಾಜ ಹಾಗೂ ಶಿಕ್ಷಕರು ಜಾಗೃತಿವಹಿಸಬೇಕೆಂದು ಮಾತನಾಡಿದರ
ಇನ್ನೂ ಎಂಎಫ್ ದರ್ಗಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡುತ್ತಾ ಬಾಲ್ಯ ವಿವಾಹಗಳು ತಡೆಗಟ್ಟಲು ಸಮುದಾಯದಲ್ಲಿ ಮೂಢನಂಬಿಕೆ ತಪ್ಪು ಕಲ್ಪನೆ ಹೋಗಲಾಡಿಸಲು ಅರಿವು ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸಂಘ-ಸಂಸ್ಥೆಗಳು ಸಹಕಾರ ಮಾಡಬೇಕೆಂದು ಪ್ರಾಸ್ತಾವಿಕ ಮಾತನಾಡಿದರು.
ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.