ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿಯ ಊಟಿ ಬುದ್ದಿನ್ನಿ ಮೈನ್ಸ್ ನಲ್ಲಿ ಮೇಲ್ಭಾಗದ ಕಲ್ಲು ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯಾಪ್ತಿಗೆ ಬರುವ ಊಟಿ ಮೈನ್ಸ್‌ನಲ್ಲಿ ದುರಂತ ಸಂಭವಿಸಿದೆ. ರಾತ್ರಿ ಮೂರನೇ ಪಾಳೆಯಲ್ಲಿ ಕೆಲಸ ತೆರಳಿದ್ದ ಕಾರ್ಮಿಕರು ಸುಮಾರು 700- 800 ಅಡಿ ಆಳದ ಅಂಡರ್ ಗ್ರೌಂಡ್ ಕೆಲಸ ನಿರ್ವಹಿಸುತ್ತಿದ್ದರೂ, ಆಗ ಮೇಲ್ಬಾಗದ ದಿಂದ ಕಲ್ಲುಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಓರ್ವ ಕಾರ್ಮಿಕ T.No.2007 ಯಲ್ಲಪ್ಪ ಮೃತಪಟ್ಟಿದ್ದರೆ, ಹನುಮಂತ ಸೇರಿದಂತೆ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನ ಹಟ್ಟಿಚಿನ್ನದಗಣಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ಕಾರ್ಮಿಕ ಮುಖಂಡರು ದೌಡಾಯಿಸಿದ್ದಾರೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ತನಿಕೆ ಆರಂಬಿಸಲಾಗಿದೆ.