ಲಿಂಗಸೂಗೂರು: ರಾಜಕೀಯ ರಂಗು ಪಡೆದಿದ್ದ ನಿಲೋಗಲ್ ಗ್ರಾಮದಲ್ಲಿ ಚರಂಡಿ ಜಗಳದಿಂದ ಮೃತಪಟ್ಟಿದ್ಧ ವೃದ್ಧೆ ಪ್ರಕರಣಕ್ಕೆ ಸಂಬಂದಿಸಿದಂತೆ 18 ಜನ ಆರೋಪಿಗಳ ವಿರುದ್ಧ ಹಟ್ಟಿ ಚಿನ್ನದ ಗಣಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಘಟನೆಯ ನಂತರ ಸಾಕಷ್ಟು ಸದ್ದು ಮಾಡಿದ್ದ ಬೇರೆ ಬೇರೆ ಆಯಾಮಗಳನ್ನು ಪಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಹಟ್ಟಿ ಚಿನ್ನದ ಗಣಿ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ, ಎನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು.
ಆರೋಪಿಗಳ ಪರ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇದ್ದಾರೆ ಎನ್ನುವ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನಲೆ 18 ಜನ ಆರೋಪಿಗಳ ವಿರುದ್ಧ ಚಿನ್ನದ ಗಣಿ ಪೊಲೀಸರು ಪ್ರಕರಣ ದಾಖಲಿಸಿ ಊಹಾಪೂಹಗಳಿಗೆ ತೆರೆ ಎಳೆಸಿದ್ದಾರೆ.
ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಚರಂಡಿ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಸೈನಿಕ ಅಮರೇಶ ತಾಯಿ ಈರಮ್ಮ ಮೃತಪಟ್ಟಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ದೆಯ ಮಗ ಅಮರೇಶ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗುತ್ತಿತ್ತು. ಇದರ ಹಿಂದೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಕೈವಾಡ ಇದೆ ಎಂದು ಪ್ರಗತಿಪರ ಮಖಂಡ ಆರ್ ಮಾನಸಯ್ಯ ಗೃಹ ಮಂತ್ರಿಗಳಿಗೆ ಮನವಿ ಮಾಡಿದ್ದರು.
ಇಂದು ಪೊಲೀಸರು ಗಲಾಟೆಯಲ್ಲಿ ಇದ್ದರೂ ಎಂದು ಶರಣಪ್ಪ ಹಾಲಾಪೂರ, ಶರಣಪ್ಪ ಹಲಕಾಶಿ, ಬಸವರಾಜ್ ಬೆಂಚಮಟ್ಟಿ, ದೊಡ್ಡಪ್ಪ ಹಾಲಾಪೂರ, ಮೌನೇಶ್ ತಳವಾರ, ಅಮರೇಶ ಹಲಕಾಶಿ, ರಮೇಶ್ ಹಾಲಾಪೂರ, ಚಂದ್ರಕಲಾ, ಹನಮಂತ ನಾಲತವಾಡ, ಶಂಕರ್, ಸಿದ್ದಪ್ಪ ಬಡಗಿ, ವಿಜಪ್ಪ, ಸಿದ್ದಪ್ಪ, ಹನಮಂತ, ವೀರೇಶ್ ಗೆಜ್ಜಲಗಟ್ಟಿ, ಮುತ್ತಪ್ಪ ಬಾರಕೇರ, ಮಲ್ಲಪ್ಪ ಕಟ್ಟಿಮನಿ, ಶರಣಪ್ಪ ಕಬ್ಬೇರ, ಪಿಡ್ಡಪ್ಪ ಕುಂಬಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.