ಇಂಡಿ : ತಾಲೂಕಿನ ಸಮಗ್ರ ನೀರಾವರಿ ಯೋಜನೆಗಾಗಿ ಮತ್ತು ನಿಂಬೆನಾಡಿನ ಅನ್ನದಾತ್ ಅನುಭವಿಸುತ್ತಿರುವ ಸಮಸ್ಯಗಳ ಕುರಿತು ಸುಮಾರು 42 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಮಾಡಿ, ಸರಕಾರದ ಗಮನ ಸೆಳೆಯುವ ಪ್ರಯತ್ನದ ಜೊತೆಗೆ ಒತ್ತಾಯ ಮಾಡಿದ್ದೆವೆ. ಆದರೆ ಸರಕಾರ ಮತ್ತು ಜನ ಪ್ರತಿನಿಧಿಗಳಲ್ಲಿ ಕೊನೆಯವರೆಗೂ ಸ್ಪಂದಿಸುವ ಗುಣಗಳೇ ಕಾಣಸಿಲ್ಲಿಲ್ಲ ಎಂದು ತಾಲೂಕು ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ್ ಸರಕಾರದ ವಿರುದ್ಧ ಕಿಡಿಕಾರಿದರು.
ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಇಂಡಿ ಪಟ್ಟಣದ ಅಗರಖೇಡ ರಸ್ತೆಯ ಪಕ್ಕದಲ್ಲಿರುವ ಕೃಷ್ಣಾ ಕಾಲುವೆಯಲ್ಲಿ ಹರಿಯುವ ಗಂಗಾ ಮಾತೆಗೆ ಡೊಳ್ಳು,ಬಾಜಾ ಬಜಂತ್ರಿ ಮತ್ತು ಮುತೈದರಿಂದ ಪೂಜೆ ಸಲ್ಲಿಸಿ ಸರಕಾರದ ವಿರುದ್ಧ ವಿನೂತನ ಚಳವಳಿಯ ಕಹಳೆ ಊದಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಮಾತಾನಾಡಿದ ಅವರು, ಸುಮಾರು 15 ವರ್ಷಗಳ ಹಿಂದೆ ಪ್ರಾರಂಭ ಕಂಡ ಗುತ್ತಿ ಬಸವಣ್ಣ ಕಾಲುವೆಗೆ ಇಂದಿಗೂ ಒಂದು ಹನಿ ನೀರು ಹರಿದಿಲ್ಲ. ಸಮಗ್ರ ನೀರಾವರಿ ಎನ್ನುವದು ಮರಿಚಿಕೆಯಾಗಿದೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ತ್ವರಿತ ಪೂರ್ಣಗೊಳಿಸಿ ರೈತರಿಗೆ ಆಸರೆಯಾಗಬೇಕು. ಇವತ್ತಿನ ತಾಲೂಕಿನ ನೀರಾವರಿ ಯೋಜನೆ ನೆನೆಗುದ್ದಿಗೆ ಬೀಳಲು ಕಾರಣ ಆಳಿದ ಸರಕಾರ ಮತ್ತು ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯ ಕಾರಣ ಎಂದರು. ಇನ್ನಾದರೂ ಈ ಭಾಗದ ಪ್ರತಿನಿಧಿಗಳು ತತಕ್ಷಣದಲ್ಲಿ ಈ ಜಲ್ವಂತ ಸಮಸ್ಯೆಯ ಕುರಿತು ಅಧಿವೇಶನದಲ್ಲಿ ಬೆಳಕು ಚಲ್ಲಬೇಕು. ರಾಜ್ಯ ಮತ್ತು ಕೇಂದ್ರ ಸರಕಾರ ಈ ನೆನಗುದ್ದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ತ್ವರಿತವಾಗಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಯೂಬ್ ನಾಟೀಕರ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಮರೆಪ್ಪ ಗಿರಣಿ ವಡ್ಡರ, ನಾನಾಗೌಡ ಪಾಟೀಲ, ದುಂಡು ಬಿರಾದಾರ, ರಾಜು ಮುಲ್ಲಾ, ಡಾ.ರಮೇಶ ರಾಠೋಡ, ಬಾಬು ಮೇತ್ರಿ, ಮುತ್ತಪ್ಪ ಪೂಜಾರಿ, ಶೋಭಾ ಕಟ್ಟಿ, ಕಾಶಿಬಾಯಿ ಗುಡ್ಲ, ರೇಖಾ ಶಿಂಗೆ, ಜಕ್ಕಪ ಗುಡ್ಲ, ದುಂಡು ಮಡ್ನಳಿ, ಪದ್ಮಮ್ಮ ರೂಗಿ, ಶ್ರೀಶೈಲ ರೂಗಿ, ಮಾಳಪ್ಪ ಗುಡ್ಲ ,ಮಾಳು ಮ್ಯಾಕೇರಿ, ತಮ್ಮನಗೌಡ ಬಿರಾದಾರ, ಸಂಜು ಪಾಯಕರ, ವಾಯಿದ ಮುಲ್ಲಾ. ಜಲೀಲ ದಡೇಲ, ಹಣಮಂತ ಹಿರೇಕುರಬರ, ರವಿ ಶಿಂದೆ, ಮಳಗು ಪೂಜಾರಿ, ಪಜಲು ಮುಲ್ಲಾ, ಜುಬೇರ್ ಮುಲ್ಲಾ, ಜಾಕೀರ್ ಗಣೀಯಾರ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.