ರಾಯಚೂರು: ಕಟ್ಟಡ ಮೆಸೆಂಡರಿಗಳಿಗೆ (ಕಾರ್ಮಿಕರು) ೫೦೦ ಕಿಟ್ ವಿತರಿಸಲಾಗುತ್ತಿದ್ದು, ಇದರಿಂದ ಈ ಕಾರ್ಮಿಕರಿಗೆ ಜಿವನೋಪಾಯಕ್ಕೆ ಅಲ್ಪ ಪ್ರಮಾಣದ ನೆರವಾಗಲಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಕಾರ್ಮಿಕ ಇಲಾಖೆಯಿಂದ ಮಂಜೂರಾದ ೫೦೦ ಕಿಟ್ ವಿತರಣೆಗೆ ಚಾಲನೆ ನೀಡಿ, ಮಾತನಾಡಿದರು. ರಾಜ್ಯ ಸರ್ಕಾರ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಕಿಟ್ ಮೂಲಕ ನೆರವು ನೀಡಿ, ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ.
ವಿದ್ಯುತ್ ಕಾರ್ಮಿಕರಿಗೆ ಇತ್ತೀಚಿಗಷ್ಟೇ ಕಿಟ್ ನೀಡಲಾಗಿದೆ. ಈಗ ಕಟ್ಟಡ ಮೆಸೆಂಡರಿಗಳಿಗೆ ಕಿಟ್ ನೀಡಲಾಗುತ್ತಿದೆ. ಈ ಹಿಂದೆ ಕೊರೊನಾ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ನೆರವು ನೀಡಲಾಗಿತ್ತು. ಈ ರೀತಿಯ ನೇರ ನೆರವು ಈ ಹಿಂದೆ ಯಾವ ಸರ್ಕಾರಗಳು ನೀಡಿರಲಿಲ್ಲ. ಬಡವರಿಗೆ ಯಾವುದೇ ತೊಂದರೆಯಾಗದಂತೆ ಅವರ ಉಪ ಜೀವನ ನಿರ್ವಹಿಸಲು ಅನುಕೂಲಕರವಾಗಲು ಈ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.
ಸರ್ಕಾರದ ಈ ಯೋಜನೆಗಳನ್ನು ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ್, ವಾರ್ಡ್ ೨೧ ರ ನಗರಸಭೆ ಸದಸ್ಯರಾದ ಎನ್.ಕೆ. ನಾಗರಾಜ, ಹರೀಶ್ ನಾಡಗೌಡ, ಯು.ನರಸರೆಡ್ಡಿ, ಮುಕ್ತಿಯಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.