ಲಿಂಗಸೂಗೂರು: ಇನ್ನೇನು ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಕೃಷ್ಣಾನದಿ ಹಿನ್ನಿರಿನ ಪ್ರದೇಶದಲ್ಲಿ ಅಕ್ರಮ ಮರಂ ದಂದೆ ಎಗ್ಗಿಲ್ಲದೆ ನಡೆಯುತ್ತದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಈ ಅಕ್ರಮ ದಂಧೆ ಮಾಡುತ್ತಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.
ಹೌದು ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಸವಸಾಗರ ಜಲಾಶಯದ ಹಿನ್ನೀರಿನ ಪ್ರದೇಶವಾದ ಜಾವೂರ ಗ್ರಾಮದ ಬಳಿ ಅಕ್ರಮ ಮೊರಂ ದಂದೆ ಹೆಗ್ಗಿಲ್ಲದೇ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಶಿವಪುತ್ರಗೌಡ ಗಂಭೀರ ಆರೋಪ ಮಾಡಿದ್ದಾರೆ. ಬಸವಸಾಗರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳ ಜೊತೆ ಮರಂ ದಂಧೆಕೋರರು ಶಾಮೀಲಾಗಿದ್ದಾರೆ.
ಸಾಮಾನ್ಯವಾಗಿ ಹಿನ್ನೀರಿನಲ್ಲಿ ಇರುವಂತಹ ಮೊರಂಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮತ್ತು ಸಂಪದ್ಭರಿತವಾಗಿ ಇರುವುದರಿಂದ ಇಲ್ಲಿನ ಮೊರಂಗೆ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾಗಿ ಇಲ್ಲಿನ ಮರಂ ದಂಧೆಕೋರರು ಸರ್ಕಾರಿ ಕಾಮಗಾರಿಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಒಂದು ಟ್ರಿಪ್ಗೆ 1000-1500 ರೂ.ಗಳಿಗೆ ಮರಂ ಮಾರಾಟ ಮಾಡುತ್ತಿದ್ದಾರೆ. ಇನ್ನು ಇಲಾಖೆಯ ನಿಯಮಾನುಸಾರ ಮರಂ ಸಾಗಾಟ ಮಾಡಲು ಅನುಮತಿ ಪಡೆದು ಅದಕ್ಕೆ ಸಬಂಧಿಸಿದಂತೆ ರಾಜಧನ ಪಾವತಿ ಮಾಡಬೇಕಿತ್ತು. ಆದರೆ ಮರಂ ದಂಧೆಕೋರರು ನಿಯಮಗಳನ್ನು ಪಾಲಿಸದೇ ಜೆಸಿಬಿ, ಟಿಪ್ಪರ್, ಟ್ರಾಕ್ಟರ್ಗಳನ್ನು ಬಳಸಿ ಬೇಕಾಬಿಟ್ಟೆಯಾಗಿ ಮರಂ ಸಾಗಾಟ ಮಾಡುತ್ತಿದ್ದಾರೆ.
ಹಿನ್ನೀರಿನ ಪ್ರದೇಶದಲ್ಲಿ ಮುಳುಗಡೆಯಾದ ಜಮೀನಿಗೆ ರೈತರು ಹುಳುಮೆ ಮಾಡಲು ಹೋದರೆ ಅನ್ನದಾತರ ವಿರುದ್ದ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ. ಆದರೆ ಮರಂ ದಂಧೆಕೋರರಿಗೆ ಮರಂ ಸಾಗಾಟ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಅಕ್ರಮವಾಗಿ ಮರಂ ಸಾಗಾಟ ಮಾಡುವವರ ವಿರುದ್ಧ ಕೆಬಿಜೆಎನ್ ಎಲ್ ಅಧಿಕಾರಿಗಳ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಒಂದು ಕಡೆ ಅನ್ನದಾತರು ಭೂಮಿ ಮುಳುಗಡೆಯಾಗಿ ಸಂಕಷ್ಟದಲ್ಲಿದ್ದು ನೀರು ಕಡಿಮೆಯಾದಾಗ ಉಳುಮೆ ಮಾಡಲು ಮಾಡಲು ಬಂದರೆ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ. ಆದರೆ ಅದೇ ಭೂಮಿ ಅಗೆದು ಕಳ್ಳತನ ಮಾಡುವ ದಂದೆಕೋರರಿಗೆ ಕುಮ್ಮಕ್ಕು ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.
ಇನ್ನಾದರೂ ಬಸವಸಾಗರ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮೊರಂ ದಂದ್ಧೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆ ಹೊರತು, ಮರಂ ದಂಧೆಕೋರರೊಂದಿಗೆ ಶಾಮೀಲಾಗಿ ಸರಕಾರಕ್ಕೆ ಮೋಸ ಮಾಡುವಂಥ ಕೆಲಸಕ್ಕೆ ಮುಂದಾಗಬಾರದು. ಒಂದು ವೇಳೆ ಈ ಒಂದು ಅಕ್ರಮಕ್ಕೆ ಅಧಿಕಾರಿಗಳು ಬ್ರೇಕ್ ಹಾಕದೇ ಹೋದರೆ ಕೆಬಿಜೆಎನ್ ಎಲ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಶಿವಪುತ್ರಗೌಡ ಹೇಳಿದ್ದಾರೆ.