ಲಿಂಗಸೂಗೂರು: ಮಧ್ವಾಚಾರ್ಯರ ಜಯಂತಿ ಹಿನ್ನಲೆಯಲ್ಲಿ ಇಂದು ಲಿಂಗಸೂಗೂರು ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಸ್ಥಾನದಲ್ಲಿ ಶ್ರೀ ಮಧ್ವ ನವಮಿಯನ್ನು ವಿಜೃಂಭಣೆಯಿಂದ ಆಚರಿಸಿಲಾಯಿತು.ಅಲ್ಲದೆ ಪಲ್ಲಕ್ಕಿ ಉತ್ಸವವೂ ಕೂಡಾ ಜರುಗಿತು. ಶ್ರೀ ವೆಂಕಟೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಾಣೇಶಾಚಾರ್ಯ ವಂದಾಲಿ, ಮೋಹನ ಜೋಷಿ, ಮಧುಸೂದನಾಚಾರ್ಯ ಪುರಾಣಿಕ, ಪ್ರಮೋದ್ ಕುಮಾರ ಕುಲಕರ್ಣಿ, ವಸಂತಕುಮಾರ್ ಬಳಗಾನೂರ, ರಮೇಶಚಾರ್ಯ ವಂದಾಲಿ, ಭೀಮಸೇನರಾವ್ ಸುಂಕದ, ವೆಂಕಟರಾವ್ ತೊರಲಬೆಂಚಿ, ಯಮನಾ ಜೋಷಿ, ಶೋಭಾ ಜೋಷಿ, ಮಿನಾಕ್ಷಿ ಪುರಾಣಿಕ, ಜ್ಯೋತಿ ಸುಂಕದ್, ಉಮಾ ಹೆಮಾದ್ರಿ, ರೂಪಾ ಕುಲಕರ್ಣಿ ಇನ್ನಿತರರು ಭಾಗವಸಿದ್ದರು.