ಲಿಂಗಸೂಗೂರು: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಚಿನ್ನದ ಗಣಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಾನಪ್ಪ ಡಿ, ವಜ್ಜಲ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ,ಡಿ ವಜ್ಜಲ್ ಮಾತನಾಡಿ ಕಾರ್ಮಿಕರಿಗೆ ಗುಣಮಟ್ಟದ ಆಹಾರದ ಕಿಟ್, ಹಾಗೂ ಗುಣಮಟ್ಟದ ಔಷದೋಪಚಾರ ಒದಗಿಸಿ, ನಿತ್ಯ 7 ರಿಂದ 8 ಕೆಜಿ ಚಿನ್ನ ಉತ್ಪಾದನೆ ಮಾಡುವ ಗುರಿ ಹೊಂದಬೇಕು. ಕಾರ್ಮಿಕರ ಕಲ್ಯಾಣವೇ ಕಂಪನಿಯ ಕಲ್ಯಾಣವೆಂದು ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿಯಾಗಿ ಕಂಪನಿಯ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಅವುಗಳನ್ನು ಸುಧಾರಿಸಬೇಕು ಎಂದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಶಿವಬಸಪ್ಪ ಹೆಸರೂರು, ಶಂಕರಗೌಡ ಬಳಗಾನೂರು, ಪರಮೇಶ ಯಾದವ್, ಹುಲ್ಲೇಶ್ ಸಾಹುಕಾರ್, ಗೋವಿಂದ ನಾಯಕ್, ಮುದುಕಪ್ಪ ನಾಯಕ್, ಗುಂಡಪ್ಪಗೌಡ ಗುರಿಕಾರ್, ಸತ್ಯನಾರಾಯಣ ಶೆಟ್ಟಿ, ಶಿವಪ್ರಸಾದ್, ನಾಗಭೂಷಣ್ ಗೆಜ್ಜಲಗಟ್ಟ, ಕಾಶಿಮಪ್ಪ, ರಮೇಶ್ ಹಟ್ಟಿ, ಬಸವರಾಜ್ ಹಟ್ಟಿ , ನಾಗಪ್ಪ, ರಮೇಶ್ ನಿಲೋಗಲ್, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.