ಕನ್ನಡದಲ್ಲೇ ಪರೀಕ್ಷೆ ಬರೆದು UPSC ಪಾಸ್ ಮಾಡಿದ ತಾಳಿಕೋಟಿ ಡಾ. ಮಹೇಶ್
ತಾಳಿಕೋಟೆ: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು, 462ನೇ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ ಡಾ.ಮಹೇಶ ಮಡಿವಾಳರ. 4 ಬಾರಿ ವಿಫಲಗೊಂಡಿದ್ದ ಡಾ. ಮಹೇಶ್, 5ನೇ ಬಾರಿಗೆಯಶಸ್ಸಿನ ಮೆಟ್ಟಿಲು ಏರಿದ್ದಾರೆ. ವಿಜಯಪುರ ತಾಳಿಕೋಟೆ ತಾಲೂಕಿನ ಮಡಿಕೇಶರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಾಯಿ-ಇವರನ್ನು ಸಾಕಲು ಮನೆಗೆಲಸಗಳಿಗೆ ತೆರಳುತ್ತಿದ್ದರು. ತಮ್ಮ ಸೇವಾವಧಿಯ ನಂತರ ದಿನದಲ್ಲಿ 6- 10 ತಾಸು ಓದುತ್ತಿದ್ದರು. ಸತತ ನಾಲ್ಕು ಬಾರಿ ವಿಫಲರಾಗಿದ್ದ ಇವರು, ಐದನೇ ಬಾರಿಗೆ ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.ಈ ಮೂಲಕ ತಮ್ಮ ಗುರಿಯನ್ನು ತಲುಪಿದ್ದಾರೆ.