ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ..! ರಾಷ್ಟ್ರ ಆಧಾರಿತ ಪಕ್ಷ.! ಇಂಡಿಯ ಪಪ್ಪುವೆಂದು ವ್ಯಂಗ್ಯ..?
ಇಂಡಿ: ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ರಾಷ್ಟ್ರ ಆಧಾರಿತ ಪಕ್ಷ ಮಾತೃ ಭೂಮಿಗೆ ಸಮರ್ಪಿತವಾದ ಪಕ್ಷವಾಗಿದೆ. ಅದಕ್ಕಾಗಿ ಇದರ ಬಗ್ಗೆ ಯಾರು ಖಚಿತ ಪಡಿಸುವ ಅಗತ್ಯವಿಲ್ಲ. ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಒಪ್ಪದವರು ಪಕ್ಷದಿಂದ ಹೊರಗೆ ನಡೆಯಬೇಕು ಎಂದು ಬಿಜಪಿ ಮುಖಂಡ ಹಣಮಂತರಾಯಗೌಡ ಪಾಟೀಲ ಹಾಗೂ ಕಾಸುಗೌಡ ಬಿರಾದಾರ ಇಂಡಿಯ ಪಪ್ಪು ಎಂದು ವ್ಯಂಗ್ಯ ಮಾಡಿದರು.
ಪಟ್ಟಣದ ಬಸವೇಶ್ವರ ವೃತದಲ್ಲಿ ಬಿಜೆಪಿ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ರಾಜ್ಯಧ್ಯಕ್ಷ ವಿಜಯೇಂದ್ರ ಭಾವಚಿತ್ರಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಕ್ಷೀರಾಭೀಷೇಕ ಮಾಡಿದರು. ಈ ವೇಳೆ ವಿಜಯೇಂದ್ರ, ಬಿ ಎಸ್ ಯಡಿಯೂರಪ್ಪ ಪರ ಘೋಷಣೆ ಕೂಗಿದರು.
ಇನ್ನೂ ಹಂದಿ, ನಾಯಿ ಎಂದು ಮೊದಲಿಸುವರು ಒಂದು ಮಾತು ಖಂಡಿತ ತಿಳಿದುಕೊಳ್ಳಬೇಕು. ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಒಪ್ಪದ ಬಿಡಾಡಿ ನಾಯಿಗಳನ್ನು ಓಡಿಸುವ ನಿಷ್ಠಾವಂತ ನಾಯಿಗಳು ನಾವು. ಅವಕಾಶವಾದಿ ಹಂದಿಗಳಲ್ಲ, ಪಕ್ಷದ ಆಂತರಿಕ ಸ್ವಚ್ಛತೆ ಬಯಸುವ ಹಂದಿಗಳು ನಾವು ಎಂದು ಸ್ವಪಕ್ಷದ ಮುಖಂಡನ ವಿರುದ್ಧ ಕಿಡಿಕಾರಿದರು. ಇನ್ನೂ ನಿಜವಾದ ತಂದೆಗೆ ತಕ್ಕ ಮಗನಾಗಿದ್ದರೆ, ಪಕ್ಷಕ್ಕೆ ಮಾಡಿರುವ ದ್ರೋಹವನ್ನು ಹಾಗೂ ಅನ್ಯ ಪಕ್ಷಕ್ಕೆ ನೀಡಿರುವ ಬೆಂಬಲದ ಬಗ್ಗೆ ಜನರಿಗೆ ತೋರಿಸಬೇಕು. ಇಲ್ಲದಿದ್ದರೇ, ರಾಜಕೀಯ ಜೀವನದಲ್ಲಿ ನಗೆ ಪಾಟಲಿಗಿಡಾಗುವಿರಿ, ನಿಜವಾದ ಬಣ್ಣ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.
ಇನ್ನೂ ಇದೆ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ರವಿ ಬಗಲಿ, ರವಿ ವಗ್ಗೆ ಮಾತನಾಡಿ, ಪಕ್ಷ ಕಟ್ಟಲು ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರ ಶ್ರಮವಿದೆ. ಈ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ, ಜನವಿರೋಧಿ ಧೋರಣೆ ಕೆಟ್ಟ ನೀತಿ ಹೆಚ್ಚಾಗಿದೆ. ಎಷ್ಟೇ ತಾಂತ್ರಿಕ ತಪ್ಪಗಳು ಇದ್ದರೂ ಸಹ, ಶಾಸಕರ ಬೆಂಬಲವಿದೆ ಎಂಬ ಕಾರಣಕ್ಕೆ ಇಡೀ ರಾಜ್ಯದಲ್ಲಿ ಅವ್ಯಾಹತವಾಗಿ ಅಕ್ರಮ ಎಸಗುತ್ತ ಹೊರಟಿರುವ ಕಾಂಗ್ರೆಸ್ ಪಕ್ಷ ವಿರುದ್ಧ ಹೋರಾಟ ಮಾಡುತ್ತೀರುವ ರಾಷ್ಟ್ರೀಯ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ವಿಜೆಯೇಂದ್ರ ಅವರ ಭಾವಚಿತ್ರಕ್ಕೆ ಕ್ಷೀರಾಭೀಷೇಕ ಮಾಡುವ ಮೂಲಕ ಶಕ್ತಿ ತುಂಬುವ ಹಾಗೂ ಪಕ್ಷದ ಬಲವರ್ಧನೆಗೆ ಈಗ ನಡೆದಿದೆ. ಅದಲ್ಲದೇ ಬರುವ ದಿನಗಳಲ್ಲಿ ತಾ.ಪಂ ಜಿ.ಪಂ ಚುನಾವಣೆ ಸೇರಿದಂತೆ ಮತ್ತೇ ಬಿಜೆಪಿ ರಾಜ್ಯದ ಆಡಳಿತವನ್ನು ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶೀಲವಂತ ಉಮರಾಣಿ, ಸೋಮು ನಿಂಬರಗಿಮಠ,ರಾಜಶೇಖರ ಯರಗಲ್ಲ, ಶರಣು ಗಿಣ್ಣಿ, ಮಹೇಶ ಹೂಗಾರ, ವಿಜಯಲಕ್ಷ್ಮೀ ರೂಗಿಮಠ, ಶ್ಯಾಮಲಾ ಬಗಲಿ ಸೇರಿದಂತೆ ಅನೇಕ ಮುಖಾಂತರು,ಕಾರ್ಯಕರ್ತರು ಇದ್ದರು.