ಮುದ್ದೇಬಿಹಾಳ:ತಾಲೂಕಿನ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಸ್ಥೆಯ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ ಪಿಯುಸಿ ಪರೀಕ್ಷೆ-೧ರ ಫಲಿತಾಂಶ ಶೇ.೯೯.೪೬ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ೧೧೨೦ ವಿದ್ಯಾರ್ಥಿಗಳಲ್ಲಿ ೧೧೧೪ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ೬೫೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೪೩೬ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೪ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ. ಭೌತಶಾಸ್ತç, ರಸಾಯನಶಾಸ್ತç, ಗಣಿತ ಮತ್ತು ಜೀವಶಾಸ್ತ (ಪಿಸಿಎಂಬಿ) ವಿಷಯಗಳಲ್ಲಿ ೫೦೧ ವಿದ್ಯಾರ್ಥಿಗಳು ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ ೧೨, ಭೌತಶಾಸ್ತçದಲ್ಲಿ ಓರ್ವ, ರಸಾಯನಶಾಸ್ತçದಲ್ಲಿ ೬, ಗಣಿತದಲ್ಲಿ ೨೮, ಜೀವಶಾಸ್ತçದಲ್ಲಿ ೩೨ ವಿದ್ಯಾರ್ಥಿಗಳು ಶೇ.೧೦೦ ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ವಜ್ರಾ ಆಚಾರಿ ೫೮೫ (ಶೇ.೯೭.೫) ಅಂಕದೊAದಿಗೆ ಮೊದಲ, ಸಾನಿಕ್ ಘೂಳಣ್ಣವರ್ ೫೮೩ (ಶೇ.೯೭.೧೬) ಅಂಕದೊಂದಿಗೆ ಎರಡನೇ, ಸಂಪತ್‌ಕುಮಾರ ಹುಗ್ಗಿ, ಸ್ನೇಹಾ ಆಮಟಿ, ಯಶೋಧಾ ಸೊರಕೊಪ್ಪ ಅವರು ೫೮೧ (ಶೇ. ೯೬.೮೩) ಅಂಕದೊಂದಿಗೆ ಮೂರನೇ, ಭಾವನಾ ಪಾಟೀಲ, ಭೀಮನಗೌಡ ಬಿರಾದಾರಪಾಟೀಲ, ಸುಪ್ರಿಯಾ ಮ್ಯಾಗೇರಿ ಅವರು ೫೮೦ (ಶೇ.೯೬) ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದು ಕಾಲೇಜಿಗೆ ಟಾಪರ್ ಆಗಿದ್ದಾರೆ. ವಿದ್ಯಾರ್ಥಿಗಳ ಅಪ್ರತಿಮ ಸಾಧನೆಗೆ ಸಂಸ್ಥೆಯ ಚೇರ್ಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ, ನಿರ್ದೇಶಕರಾದ ದರ್ಶನಗೌಡ ಪಾಟೀಲ, ಕುಮಾರಗೌಡ ಪಾಟೀಲ, ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ), ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಎಲ್ಲರನ್ನೂ ಅಭಿನಂದಿಸಿದ್ದಾರೆ.
ನಮ್ಮ ಸಾಧಕ ವಿದ್ಯಾರ್ಥಿಗಳು ಪ್ರತಿಭಾವಂತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುಂಬರುವ ನೀಟ್ ಪರೀಕ್ಷೆಗೆ ಭರ್ಜರಿಯಾಗಿ ಸಿದ್ದತೆ ನಡೆಸುತ್ತಿದ್ದಾರೆ. ಈ ಬಾರಿ ೧೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾಗಿ ಎಂಬಿಬಿಎಸ್‌ಗೆ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳುವ ವಿಶ್ವಾಸ ಇದೆ.
–ಅಮಿತ್‌ಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ.
ಉತ್ಸಾಹಿ ಕ್ರಿಯಾಶೀಲ ಸ್ನಾತಕೋತ್ತರ ಪದವೀಧರ ಯುವಕ, ನಮ್ಮ ಹಿರಿಯ ಪುತ್ರ ಅಮಿತ್‌ಗೌಡ ಪಾಟೀಲ ನೇತೃತ್ವದಲ್ಲಿ ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ. ಥಿಯರಿ ವಿಷಯಗಳ ಜೊತೆಗೆ ಪ್ರಾö್ಯಕ್ಟಿಕಲ್ ವಿಷಯಗಳಾಗಿರುವ ನೀಟ್, ಜೆಇಇ ಮೇನ್ಸ್ನತ್ತ ಸಾಧನೆ ತೋರಿಸಲು ಅವರ ನೇತೃತ್ವದ ತಂಡ ಉತ್ಸುಕತೆಯಿಂದ ಕೆಲಸ ಮಾಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಮತ್ತೇ ನಾವು ಉತ್ತರ ಕರ್ನಾಟಕದಲ್ಲಿ ಟಾಪರ್ ಆಗುವ ವಿಶ್ವಾಸ ಇದೆ.
–ಎಂ.ಎಸ್.ಪಾಟೀಲ, ಚೇರ್ಮನ್, ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ